ಐತಿಹಾಸಿಕ ಹಾಸನಾಂಬೆ ದರ್ಶನಕ್ಕೆ ಇಂದು ತೆರೆಬೀಳಲಿದ್ದು, ಮಧ್ಯಾಹ್ನ 12.30ಕ್ಕೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಈವರೆಗೆ 31 ಲಕ್ಷಕ್ಕೂ ಅಧಿಕ ಭಕ್ತರು ತಾಯಿ ದರ್ಶನ ಪಡೆದಿದ್ದಾರೆ.
ಟಿಕೆಟ್ ಹಾಗೂ ಲಡ್ಡು ಪ್ರಸಾದದಿಂದ ಒಟ್ಟು 25.36 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಸಾರ್ವಜನಿಕ ಭಕ್ತರ ದರ್ಶನಕ್ಕೆ ತೆರೆಬಿದ್ದಿದ್ದು, ಇನ್ನು ಗಣ್ಯರಿಗಷ್ಟೇ ಅವಕಾಶ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ದೇಗುಲದ ಬಾಗಿಲು ಮುಚ್ಚಿ ಸಿಲ್ ಮಾಡಲಾಗುತ್ತದೆ.
















