ಬೆಂಗಳೂರು : ದೇಶದ ಬೃಹತ್ ಮ್ಯೂಚುವಲ್ ಫಂಡ್ ಹೌಸ್ ಗಳಲ್ಲಿ ಒಂದಾಗಿರುವ SBI ಈಗ ಎರಡು ಹೊಸ ಮ್ಯೂಚುವಲ್ ಫಂಡ್ ಗಳನ್ನು ಆರಂಭಿಸಿದೆ. ಇದರೊಂದಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಸಿಹಿ ಸುದ್ದಿ ದೊರೆತಂತಾಗಿದೆ. SBI ನಿಫ್ಟಿ ಸ್ಮಾಲ್ ಕ್ಯಾಪ್ 250 ಇಟಿಎಫ್ ಹಾಗೂ ಎಸ್ ಬಿಐ ನಿಫ್ಟಿ 200 ವ್ಯಾಲ್ಯೂ 30 ಇಟಿಎಫ್ ಎಂಬ ಎರಡು ಇಟಿಎಫ್ ಮಾದರಿಯ ಮ್ಯೂಚುವಲ್ ಫಂಡ್‌ಗಳನ್ನು ಆರಂಭಿಸಿದೆ.
ಮೇ 7ರಿಂದಲೇ ಹೊಸ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಹೂಡಿಕೆ ಮಾಡಲು ಮೇ 18ರವರೆಗೆ ಅವಕಾಶ ನೀಡಲಾಗಿದೆ. ಎರಡೂ ಯೋಜನೆಗಳಲ್ಲಿ ಕನಿಷ್ಠ 5 ಸಾವಿರ ರೂಪಾಯಿಯಿಂದ ಹೂಡಿಕೆ ಆರಂಭಿಸಬಹುದು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ ಎಂದು ಎಸ್ ಬಿಐ ಮ್ಯೂಚುವಲ್ ಫಂಡ್ ತಿಳಿಸಿದೆ. ಎರಡೂ ಯೋಜನೆಗಳ ಮಾಹಿತಿ ಇಲ್ಲಿದೆ.
SBI ನಿಫ್ಟಿ ಸ್ಮಾಲ್ ಕ್ಯಾಪ್ 250 ಇಟಿಎಫ್
ದೀರ್ಘಾವಧಿಯ ಹೂಡಿಕೆದಾರರನ್ನು ಕೇಂದ್ರೀಕರಿಸಿ ಇದನ್ನು ಆರಂಭಿಸಲಾಗಿದೆ. ಇದು ನಿಫ್ಟಿ ಸ್ಮಾಲ್ಕ್ಯಾಪ್ 250 ಇಂಡೆಕ್ಸ್ ಆಗಿದೆ. ನಿಫ್ಟಿ 500 ಕಂಪನಿಗಳ ಪಟ್ಟಿಯಲ್ಲಿ 251 ರಿಂದ 500 ನೇ ಸ್ಥಾನದಲ್ಲಿರುವ 250 ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಲಾಗುತ್ತದೆ.
SBI ನಿಫ್ಟಿ 200 ವ್ಯಾಲ್ಯೂ 30 ಇಟಿಎಫ್
ಇದು ಕೂಡ ದೀರ್ಘಾವಧಿ ಹೂಡಿಕೆಗೆ ಅನುಕೂಲವಾಗಿದೆ. ನಿಫ್ಟಿ 200 ಇಂಡೆಕ್ಸ್ನಲ್ಲಿರುವ ಪ್ರಮುಖ 30 ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಲಾಗುತ್ತದೆ. ಬೆಲೆ-ಆದಾಯ ಅನುಪಾತ (P/E), ಬುಕ್ ವ್ಯಾಲ್ಯೂ ಮತ್ತು ಡಿವಿಡೆಂಡ್ ಯೀಲ್ಡ್ ನಂತಹ ಅಂಶಗಳನ್ನು ಪರಿಗಣಿಸಿ 30 ಕಂಪನಿಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಗಮನಿಸಿ :
SBI ಹೊಸ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಸ್ಟೋರಿಯನ್ನು ಪ್ರಕಟಿಸಲಾಗಿದೆ. ನಾವು ಹೂಡಿಕೆಗೆ ಶಿಫಾರಸು ಮಾಡುತ್ತಿಲ್ಲ. ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಯ ಏರಿಳಿತದ ಮೇಲೆ ಆಧಾರವಾಗಿರುತ್ತವೆ. ಅಂದರೆ, ರಿಸ್ಕ್‌ನಿಂದ ಕೂಡಿರುತ್ತವೆ. ಹೂಡಿಕೆ ಮಾಡುವ ಮುನ್ನ ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ : ಊರಿನ ಜಾತ್ರೆಗೆ ಬಂದವನ ಬರ್ಬರ ಕೊಲೆ – ಕುಡಿದ ಅಮಲಿನಲ್ಲಿ ಭೀಕರ ಕೃತ್ಯ!



















