ಬೆಂಗಳೂರು : ಮಧ್ಯಪ್ರಾಚ್ಯದ ಬಿಕ್ಕಟ್ಟು, ವಿದೇಶಿ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಿಂದ ವಿಮುಖರಾಗುತ್ತಿರುವುದು ಸೇರಿ ಹಲವು ಕಾರಣಗಳಿಂದಾಗಿ ಮಾರುಕಟ್ಟೆ ಕುಸಿಯುತ್ತಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರು ಕೂಡ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಜನ ಸುರಕ್ಷಿತ ಅಥವಾ ಸಾಂಪ್ರದಾಯಿಕ ಹೂಡಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸುರಕ್ಷಿತ ಹಾಗೂ ಸಾಂಪ್ರದಾಯಿಕ ಹೂಡಿಕೆಗೆ ನಿಶ್ಚಿತ ಠೇವಣಿ ಅಥವಾ ಎಫ್ ಡಿ (SBI Fixed Deposit Schemes) ಕೂಡ ಪ್ರಮುಖವಾಗಿದೆ.
ಅದರಲ್ಲೂ, ಕೇಂದ್ರ ಸರ್ಕಾರಿ ಸ್ವಾಮ್ಯದ, ದೇಶದಲ್ಲೇ ಬೃಹತ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಎಫ್‌ಡಿ ಇರಿಸುವುದು ಒಳ್ಳೆಯ ಆಯ್ಕೆಯಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಎಸ್‌ಬಿಐನಲ್ಲಿ ಕನಿಷ್ಠ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಇರಿಸಬಹುದಾಗಿದೆ. ಹೂಡಿಕೆಯ ಮೊತ್ತಕ್ಕೆ ಅನುಗುಣವಾಗಿ ಶೇ.3.05ರಿಂದ ಶೇ.7.15ರಷ್ಟು ಬಡ್ಡಿ ನೀಡಲಾಗುತ್ತದೆ.
64 ಸಾವಿರ ರೂ. ಬಡ್ಡಿ ಆದಾಯ ಹೇಗೆ?
ಎಸ್‌ಬಿಐನಲ್ಲಿ ನೀವು ಒಂದು ಲಕ್ಷ ರೂಪಾಯಿಯನ್ನು ನಿಶ್ಚಿತ ಠೇವಣಿ ಇರಿಸಿದರೆ, ಸುಮಾರು 64,227 ರೂಪಾಯಿ ಬಡ್ಡಿ ಆದಾಯ ಲಭಿಸಬಹುದಾಗಿದೆ. ಒಂದು ಲಕ್ಷ ರೂಪಾಯಿಯನ್ನು 7 ವರ್ಷಗಳ ಅವಧಿಗೆ ಎಫ್‌ಡಿ ಇರಿಸಿದರೆ, ಏಳು ವರ್ಷಗಳ ನಂತರ 64,227 ರೂ. ಬಡ್ಡಿ ಸೇರಿ ನಿಮಗೆ ಒಟ್ಟು 1,64,227 ರೂಪಾಯಿ ಸಿಗುತ್ತದೆ. ಇದು ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವುದರಿಂದ ಸುರಕ್ಷಿತ ಹೂಡಿಕೆ ಎನಿಸಿದೆ.
ಎಸ್‌ಬಿಐನಲ್ಲಿ 7 ವರ್ಷಗಳ ಹೂಡಿಕೆಗೆ ಆಯಾ ವಯಸ್ಸಿನವರಿಗೆ ಅನುಗುಣವಾಗಿ ಬಡ್ಡಿ ನೀಡಲಾಗುತ್ತದೆ. ಜನರಲ್ ಸಿಟಿಜನ್ ಅಂದರೆ, 60 ವರ್ಷದೊಳಗಿನವರಿಗೆ ಶೇ.6.05ರಷ್ಟು ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ.7.05ರಷ್ಟು ಬಡ್ಡಿ ನೀಡಲಾಗುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಹೂಡಿಕೆ ಮಾಡುವ ಹಣಕ್ಕೆ ಬಡ್ಡಿ ಆದಾಯದಲ್ಲಿ ವ್ಯತ್ಯಾಸವಾಗುತ್ತದೆ.
ಗಮನಿಸಿ
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಎಫ್ ಡಿ ಹೂಡಿಕೆಯ ಬಗ್ಗೆ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಲಾಗಿದೆ. ಇದು ನೀವು ಹೂಡಿಕೆ ಮಾಡಲು ನಾವು ಮಾಡುವ ಶಿಫಾರಸು ಅಲ್ಲ. ಮಾಹಿತಿ ದೃಷ್ಟಿಯಿಂದ ಮಾತ್ರ ಲೇಖನವನ್ನು ಪರಿಗಣಿಸಬೇಕು. ಯಾವುದೇ ಮಾದರಿಯ ಹೂಡಿಕೆಗೂ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯುವುದನ್ನು ಮರೆಯದಿರಿ.
ಇದನ್ನೂ ಓದಿ : ಯುಪಿಎಸ್ಸಿಯಲ್ಲಿ ಭರ್ಜರಿ 845 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : 2.25 ಲಕ್ಷ ರೂ.ವರೆಗೆ ಸಂಬ



















