ಬೆಂಗಳೂರು : ಕೇಂದ್ರ ಸರ್ಕಾರದ ಉದ್ಯೋಗ ಪಡೆಯಬೇಕು, ಅದರಲ್ಲೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿರುವವರಿಗೆ ಒಳ್ಳೆಯ ಅವಕಾಶ ದೊರೆತಿದೆ. ರೈಲ್ವೆ ಇಲಾಖೆಯಲ್ಲಿ (RRB Recruitment 2026) ಖಾಲಿ ಇರುವ 3,477 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ದೊರೆತಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಕುರಿತು ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ
ಹುದ್ದೆಗಳ ಹೆಸರು: ನಾನ್-ಟೆಕ್ನಿಕಲ್ ಪಾಪುಲರ್ ಕೆಟಗರೀಸ್
ಒಟ್ಟು ಹುದ್ದೆಗಳು: 3,477
ಅರ್ಜಿ ಸಲ್ಲಿಕೆ ಮಾದರಿ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 6
ಉದ್ಯೋಗದ ಸ್ಥಳ: ದೇಶಾದ್ಯಂತ
ರೈಲ್ವೆ ನೇಮಕಾತಿ ಮಂಡಳಿಯ ನಿಯಮಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ನೇಮಕಾತಿ ಹೊಂದಿದವರಿಗೆ 7ನೇ ವೇತನ ಆಯೋಗದ 5 ಹಾಗೂ 6ನೇ ಲೆವೆಲ್ ಅನ್ವಯ ಸಂಬಳ ನೀಡಲಾಗುತ್ತದೆ. ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಕೊನೆಗೆ ಸಂದರ್ಶನ ನಡೆಸುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ rrbcdg.gov.in ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆಯ ಅಧಿಸೂಚನೆಯನ್ನು ಓದಬೇಕು
ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಬೇಕು.
ಅರ್ಜಿಯನ್ನು ಯಾವುದೇ ತಪ್ಪುಗಳಿಲ್ಲದ ರೀತಿ ಭರ್ತಿ ಮಾಡಬೇಕು
ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು
ಇದನ್ನೂ ಓದಿ : ವಿಮಾ ಮಾರಾಟ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಐಆರ್‌ಡಿಎಐ ಚಿಂತನೆ!



















