ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವವರಿಗೆ ಶುಭ ಸಮಾಚಾರ ದೊರೆತಿದೆ. ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿಯು 191 ಹುದ್ದೆಗಳ ನೇಮಕಾತಿಗಾಗಿ (RRB Recruitment 2026) ಅಧಿಸೂಚನೆ ಹೊರಡಿಸಿದೆ. 191 ಜೂನಿಯರ್ ಟ್ರಾನ್ಸ್ ಲೇಟರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೂಡಲೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ ಹೆಸರು : ರೈಲ್ವೆ ನೇಮಕಾತಿ ಮಂಡಳಿ ( RRB )
ಒಟ್ಟು ಹುದ್ದೆಗಳ ಸಂಖ್ಯೆ: 191
ಉದ್ಯೋಗ ಸ್ಥಳ: ಬೆಂಗಳೂರು ಸೇರಿ ದೇಶದ ಹಲವೆಡೆ
ಹುದ್ದೆ ಹೆಸರು: ಜೂನಿಯರ್ ಟ್ರಾನ್ಸ್ ಲೇಟರ್ ಇತ್ಯಾದಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸೆಂಬರ್ 4
ಜೂನಿಯರ್ ಟ್ರಾನ್ಸ್ ಲೇಟರ್, ಪಬ್ಲಿಕ್ ಪ್ರಾಸಿಕ್ಯೂಟರ್, ಲ್ಯಾಬ್ ಅಸಿಸ್ಟಂಟ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿ ಕೂಡ 4 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಪಿಯುಸಿ, ಡಿಪ್ಲೋಮಾ, ಎಲ್.ಎಲ್.ಬಿ, ಎಂಬಿಎ, ಸ್ನಾತಕೋತ್ತರ ಪದವಿ ಮುಗಿಸಿರಬೇಕು ಎಂದು ತಿಳಿಸಲಾಗಿದೆ. ಎಸ್ಸಿ, ಎಸ್ಟಿ, ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದವರಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ rrbapply.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು
ಅರ್ಜಿ ಸಲ್ಲಿಕೆ ಕುರಿತ ಅಧಿಸೂಚನೆ ಓದಿಕೊಳ್ಳಬೇಕು
ಅರ್ಜಿಯನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಂಡಿರಬೇಕು


















