ಉಡುಪಿ : ಜಿಲ್ಲೆಯ ಕುಂದಾಪುರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯೊಬ್ಬರು ಕಾಣಸಿಕ್ಕಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸುರೇಶ್ ಪ್ರಭು, ಬಿಡುವಿಲ್ಲದ ನಮೋ ಕಾರ್ಯವೈಖರಿ ಹಾಗೂ ಅವರ ದೂರದೃಷ್ಟಿಯುಳ್ಳ ಆಡಳಿತಕ್ಕೆ ಫಿದಾ ಆಗಿಬಿಟ್ಟಿದ್ದಾರೆ.
ಈ ಹಿನ್ನಲೆಯಲ್ಲಿ ತಮ್ಮ ಅಭಿಮಾನವನ್ನ ತಾವು ತೊಡಗಿಸಿಕೊಂಡಿರುವ ವೃತ್ತಿಯಲ್ಲೇ ವಿಶಿಷ್ಟವಾಗಿ ಸೇವೆ ಸಲ್ಲಿಸುವುದರ ಮೂಲಕ ವ್ಯಕ್ತಪಡಿಸಿದ್ದು, ಪ್ರಯಾಣಿಕರು ಇವರ ಆಟೋದಲ್ಲಿ ಪ್ರಯಾಣ ಬೆಳಸಿದರೆ 13 ಕಿಲೋ ಮೀಟರ್ ಗೆ ಕೇವಲ 1 ರೂಪಾಯಿ ಬಾಡಿಗೆಯನ್ನ ನಿಗದಿಪಡಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರ 13 ವರ್ಷಕ್ಕೆ ದಾಪುಗಲಿಟ್ಟ ಹಿನ್ನಲೆಯಲ್ಲಿ ಆಟೋ ಚಾಲಕರಾದ ಸುರೇಶ್ ಪ್ರಭು ಈ ವಿಶಿಷ್ಟ ಆಫರ್ ನೀಡಿದ್ದಾರೆ. ಇವರು ಕಳೆದ 13 ವರ್ಷಗಳಿಂದ ಇದೇ ರೀತಿಯ ಕೆಲಸವನ್ನು ಮಾಡಿಕೊಂಡು ಬಂದಿದ್ದು, ಇವರ ಅಪ್ಪಟ ಅಭಿಮಾನಕ್ಕೆ ಸಾರ್ವಜನಿಕರು ಮನಸೋತಿದ್ದಾರೆ.
ಇದನ್ನೂ ಓದಿ : ‘ಬುಮ್ರಾ ಸರ್ವಕಾಲಿಕ ಶ್ರೇಷ್ಠ ವೇಗಿ’ ; ದಂತಕಥೆಗಳನ್ನು ಹಿಂದಿಕ್ಕಿ ಭಾರತದ ತಾರೆಯನ್ನು ‘ಪೇಸ್ ಕಿಂಗ್’ ಎಂದ ಶೋರಿಫುಲ್ ಇಸ್ಲಾಂ!



















