ಬೆಂಗಳೂರು : ಬೆಂಗಳೂರಿನ ಕೋಗಿಲು ಲೇಔಟ್‌ನ ಅಕ್ರಮ ವಲಸಿಗರಿಗೆ ಮನೆ ಕೊಡ ಕೂಡದು ಎಂದು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಕರ್ನಾಟಕದ ಹಲವು ಅಸಲಿ ನಿರಾಶ್ರಿತರಿಗೆ ಮೊದಲು ಆಶ್ರಯ ಕಲ್ಪಿಸಲಿ. ಕೋಗಿಲು ಲೇಔಟ್‌ನ ಮೂಲ ಕನ್ನಡಿಗರಿಗೆ ವಸತಿ ನೀಡಲಿ. ಅದು ಬಿಟ್ಟು ಯಾರೋ ಕೇರಳದವರು ಹೇಳಿದರು ಎಂದು ವಲಸಿಗರಿಗೆ ಮನೆ ಕೊಟ್ಟರೆ ಉಗ್ರ ಹೋರಾಟ ನಡೆಸಬೇಕಾಗುತ್ತೆ ಎಂದು ಸರ್ಕಾರಕ್ಕೆ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಸೂರು ಕಳೆದುಕೊಂಡ ಬಡವರಿಗಿಲ್ಲ ಪರಿಹಾರ!
ನಮ್ಮ ರಾಜ್ಯದಲ್ಲಿ ಅನೇಕ ದಲಿತರು, ಮುಸ್ಲಿಮರು, ದಶಕಗಳಿಂದ ಹೋರಾಟ ಮಾಡಿದಂತಹ ರೈತಪರ ಹೋರಾಟಗಾರರು, ಕನ್ನಡಪರ ಹೋರಾಟಗಾರರು ಮನೆಗಳಿದಲ್ಲೇ ಇದ್ದಾರೆ ಅಂತವರಿಗೆ ಮೊದಲು ಮನೆಗಳನ್ನು ಕೊಡುವ ಕೆಲಸ ಮಾಡಿ ಎಂದು ಕಟುವಾಗಿ ಹೇಳಿದ್ದಾರೆ. ಬೆಳಗಾವಿಯ ಕಲ್ಯಾಣನಗರದಲ್ಲಿ ಪ್ರೇಮ ಎಂಬುವವರು 3ವರ್ಷಗಳಿಂದ ಧರಣಿ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ನಮ್ಮ ಸರ್ಕಾರ ಮನೆ ಕೊಟ್ಟಿಲ್ಲ ಅವರ ಕೂಗು ನಿಮಗೆ ಕೇಳಿಸಿಲ್ಲವಾ? ಹಾಗೆಯೇ ಕೃಷ್ಣ ಮೇಲ್ದಂಡೆ ಸಂತ್ರಸ್ತರ ಕಣ್ಣೀರು ವರೆಸುವಂತ ಕೆಲಸವನ್ನು ಸರ್ಕಾರ ಇಲ್ಲಿಯವರೆಗೂ ಮಾಡಿಲ್ಲ, ಇನ್ನು, ಧಾರವಾಡ, ಬಳ್ಳಾರಿಯಲ್ಲಿ ಕೆಡಿಬಿ ಭೂಮಿ ಕೊಟ್ಟವರಿಗೆ ನೆರವು ಕೊಟ್ಟಿಲ್ಲ ಹಾಗೂ ಚಿಕ್ಕಮಂಗಳೂರಿನ ಮೂಡಿಗೆಯಲ್ಲಿ ನೆರೆ ಬಂದು ಕೊಚ್ಚಿ ಹೋದ 11 ಕುಟುಂಬಗಳಿಗೂ ಸಹ ಮನೆ ನೀಡಿಲ್ಲ, ಅದೇ ರೀತಿ, ಕೆಜೆ ಹಳ್ಳಿಯಲ್ಲಿ 29 ದಲಿತರ ಮನೆಗಳನ್ನು ತೆರವು ಮಾಡಿದಾಗಲು ಸಹ ಸರ್ಕಾರದ ಕಣ್ಣು ತೆರೆದಿಲ್ಲ.
ಹಾಗಯೇ, ಶಿವಮೊಗ್ಗದಲ್ಲಿ ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಸಾಗರ, ಹೊಸನಗರ ವ್ಯಾಪ್ತಿಯ 6 ಸಾವಿರಕ್ಕೂ ಅಧಿಕ ರೈತರು ಭೂಮಿ ಕಳೆದು ಕೊಂಡಿದ್ದರು ಅವರಿಗೆ ಇನ್ನೂ ಕೂಡ ಪರಿಹಾರ ದೊರೆಕಿಲ್ಲ, ಕರಾವಾರದ ಕೈಗಾ ಅಣುಸ್ಥವಾರದ ರೈತರಿಗೆ ವರ್ಷಗಳಿಂದ ಹಣ ನೀಡದೆ ಸತಾಯಿಸುತ್ತಿದ್ದು, ಈ ಕುರಿತು ಮಾನ್ಯ ದೇಶಪಾಂಡೆಯವರು ಧರಣಿ ಕೂತಿದ್ದರು ಅವರಿಗೂ ಸಹ ಇನ್ನು ನ್ಯಾಯ ಸಿಕ್ಕಿಲ್ಲ. ಕರ್ನಾಟಕದ ಅಲೆಮಾರಿಗಳಿಗೆ ಇನ್ನೂ ಸಹ ಹಲವರಿಗೆ ಮನೆ, ಕೂಡಿಯಲಿಕೆ ನೀರು ಇಲ್ಲದೆ ಪರದಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ನಮ್ಮ ಸರ್ಕಾರ 2 ವರ್ಷಗಳ ಹಿಂದೆ ಬಂದು ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ಶೆಡ್ ಕಟ್ಟಿಕೊಂಡವರಿಗೆ ಮನೆ ಕೊಡಲು ಹೊರಟ್ಟಿದೆ. ಅದನ್ನು ನೋಡಿಕೊಂಡು ನಾವು ಕನ್ನಡದವರು ಸುಮ್ಮನಿರಲು ಆಗುವುದಿಲ್ಲ. ಇದರ ವಿರುದ್ದ ಧ್ವನಿ ಎತ್ತುತಿದ್ದೇವೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಮನೆಗಳನ್ನು ಕೊಡುವುದೇ ಆದರೆ, ಇದಕ್ಕೂ ಮುಂಚೆ ಎಷ್ಟು ಸ್ಲಮ್‌ಗಳನ್ನು ತೆರೆವುಗೊಳಿಸಿದ್ದೀರಿ ಅವರಿಗೆ ಮೊದಲು ಪರಿಹಾರ ನೀಡಿ, ಅಕ್ರಮವಾಗಿ ಶೆಡ್ ಹಾಕಿಕೊಂಡು ಬಂದವರಿಗೆ ನಮ್ಮ ಬಿಡಿಎ ನಿವೇಷನಗಳನ್ನು ನೀಡಿದರೆ ನಾವು ಕೈಕಟ್ಟಿ ಕೂರಲು ಸಾದ್ಯವಿಲ್ಲ. ಈ ಕೂಡಲೇ ಬಿಡಿಎ ನೀವೇಷನಗಳನ್ನು ಮೂಲ ಕನ್ನಡಿಗರಿಗೆ ನೀಡುವ ಕೆಲಸ ಮಾಡಿ. ಇದಕ್ಕೂ ಮೊದಲು ಈವರೆಗೆ ಯಾರಿಗೆಲ್ಲಾ ಪರಿಹಾರ ನೀಡಬೇಕೋ ಅವರಿಗೆ ನೀಡಿ ಎಂದು ಈ ಮೂಲಕ ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : 1 ಗಂಟೆಯೊಳಗೆ ಬಾರ್, ಪಬ್ ಕ್ಲೋಸ್ ಮಾಡ್ಬೇಕು, ನಿಯಮ ಮೀರಿದರೆ ಕೇಸ್ ಗ್ಯಾರಂಟಿ | ಜಿ. ಪರಮೇಶ್ವರ್



















