ಬೆಂಗಳೂರು ಗ್ರಾಮಾಂತರ : ಗಿಡಗಳಿಗೆ ನೀರು ಹಾಯಿಸುತ್ತಿದ್ದ ನೀರಿನ ಟ್ಯಾಂಕರ್‌ಗೆ ಆಯಿಲ್ ಟ್ಯಾಂಕರ್ ಡಿಕ್ಕಿಯಾಗಿದ್ದು, ಆಯಿಲ್ ಟ್ಯಾಂಕರ್‌ನ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಸಾದಪನಹಳ್ಳಿ ಗೇಟ್ ಬಳಿ ನಡೆದಿದೆ.
ಹೊಸಕೋಟೆ ಯಿಂದ ದೇವನಹಳ್ಳಿ ಕಡೆಗೆ ಸಿಮೆಂಟ್ ಮಿಕ್ಸಿಂಗ್‌ಗೆ ಹಾಕುವ ಆಯಿಲ್ ತುಂಬಿಕೊಂಡು ಬರ್ತಿದ್ದ ಟ್ಯಾಂಕರ್, ಇತ್ತ ಇನ್ನೊಂದು ಟ್ಯಾಂಕರ್ ಹೆದ್ದಾರಿಯಲ್ಲಿನ ಗಿಡಗಳಿಗೆ ನೀರು ಹಾಯಿಸುತ್ತಿತ್ತು, ಈ ವೇಳೆ ಅತಿವೇಗದಲ್ಲಿ ಬಂದ ಆಯಿಲ್ ಟ್ಯಾಂಕರ್‌ನಿಂದ ನೀರಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಸದ್ಯ ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಟ್ಯಾಂಕರ್ ಚಾಲಕನ ಮೃತದೇಹವನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ : ಮಂಗಳೂರು ಜೈಲಿಗೆ DGP ಅಲೋಕ್ ಕುಮಾರ್ ದಿಢೀರ್ ಭೇಟಿ | ಭದ್ರತಾ ವ್ಯವಸ್ಥೆ ಪರಿಶೀಲನೆ



















