ಮೈಸೂರು: ಇರಾನ್ ಇಸ್ರೇಲ್ ಯುದ್ಧದ ಹಿನ್ನೆಲೆ ರಾಜ್ಯದಲ್ಲಿ ಗ್ಯಾಸ್ ಅಭಾವ ಮುಂದುವರೆದಿದ್ದು, ಮೈಸೂರಿನಲ್ಲೂ ಕೂಡ ಅಡುಗೆ ಅನಿಲ ಸಿಲಿಂಡರ್ ಪಡೆಯಲು ಜನರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಹುಣಸೂರಿನ ಚೌಡಾಂಬಿಕಾ ಗ್ಯಾಸ್ ಏಜೆನ್ಸಿ ಮಾಲೀಕರು “NO STOCK” ಬೋರ್ಡ್ ಹಾಕಿದ್ದರಿಂದ ಸಿಟ್ಟಿಗೆದ್ದ ಗ್ರಾಹಕರು ಮೂರು ತಿಂಗಳಾದರೂ ಸಿಲಿಂಡರ್ ವಿತರಣೆ ಮಾಡಿಲ್ಲವೆಂದು ಏಜೆನ್ಸಿಗೆ ಮುತ್ತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುದ್ಧದ ನೆಪದಲ್ಲಿ ಮತ್ತಷ್ಟು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಚೇರಿ ಹಾಗೂ ಗೋದಾಮು ಮುಂದೆ ಪ್ರತಿಭಟನೆ ನಡಿಸಿದ್ದಾರೆ.
ಈ ವೇಳೆ ಏಜೆನ್ಸಿ ಮಾಲೀಕರು ಲೋಡ್ ಬಂದರೆ ವಿತರಣೆ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಮಾಲೀಕ ಮಾತು ಕೇಳದ ಜನರು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಸ್ಥಳಕ್ಕೆ ಹುಣಸೂ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. ಈ ವೇಳೆ ಏಜೆನ್ಸಿ ಬದಲಾಯಿಸಲು ಒತ್ತಾಯಿಸಿದ ಗ್ರಾಹಕರು ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ.
ಇನ್ನು, ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಮಾದಿಗಹಳ್ಳಿ ಗ್ರಾಮದಲ್ಲಿ ಜನರು ಅಡುಗೆ ಅನಿಲ ಸಿಲಿಂಡರ್ ಪಡೆಯಲು ಪರದಾಡುತ್ತಿದ್ದಾರೆ. ಶ್ರೀ ಮಹದೇಶ್ವರ ಭಾರತ್ ಗ್ಯಾಸ್ ಡಿಸ್ಟ್ರಿಬ್ಯುಟರ್ಸ್ ಗೋಡೌನ್ ಮುಂದೆ ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತ್ತಿರುವ ದೃಶ್ಯ ಕಂಡು ಬಂದಿದೆ.
ಇದನ್ನೂ ಓದಿ: ಸಿಡಿದೆದ್ದ ಸ್ಟಾಲಿನ್ – ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಪ್ರತಿಗೆ ಬೆಂಕಿ ಹಚ್ಚಿ, ಕಪ್ಪು ಬಾವುಟ ಪ್ರದರ್ಶನ!



















