ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಬೆಂಗಳೂರು ಗ್ರಾಮಾಂತರ

Ather 450-Launch: ಹೊಸ 2025 ಏಥರ್ 450 ಸ್ಕೂಟರ್‌ ಬಿಡುಗಡೆ

January 13, 2025
Ather 450-Launch: ಹೊಸ 2025 ಏಥರ್ 450 ಸ್ಕೂಟರ್‌ ಬಿಡುಗಡೆ
Share on WhatsappShare on FacebookShare on Twitter
 2025 ಏಥರ್ 450ಯಲ್ಲಿ ಮಲ್ಟಿ ಮೋಡ್ ಟ್ರಾಕ್ಷನ್ ಕಂಟ್ರೋಲ್, ಮ್ಯಾಜಿಕ್ ಟ್ವಿಸ್ಟ್ ಮತ್ತುಅಧಿಕ ರೇಂಜ್‌ಹೊಂದಿದೆ. .

ಬೆಂಗಳೂರು, 09 ಜನವರಿ 2025: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಏಥರ್ ಎನರ್ಜಿ ಲಿಮಿಟೆಡ್ (Ather Energy Limited) ಇಂದು ಹೊಸ ಅಪ್ ಡೇಟ್‌ಗಳನ್ನು ಹೊಂದಿರುವ 2025 ಏಥರ್ 450 ಸ್ಕೂಟರ್ ಬಿಡುಗಡೆ ಮಾಡಿದೆ.‌ . 450ಎಕ್ಸ್ ಮತ್ತು 450 ಅಪೆಕ್ಸ್ ಸ್ಕೂಟರ್‌ಗಳಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸುವ ಉದ್ದೇಶದಿಂದ ಮಲ್ಟಿ-ಮೋಡ್ ಟ್ರಾಕ್ಷನ್ ಕಂಟ್ರೋಲ್ ಅನ್ನು ಒದಗಿಸಲಾಗುತ್ತಿದೆ. ವಿಶೇಷವಾಗಿ ನಗರದ ದಟ್ಟ ಟ್ರಾಫಿಕ್‌ನಲ್ಲಿ ಅನುಕೂಲಕರವಾಗಿ, ಸುಲಭವಾಗಿ ರೈಡ್ ಮಾಡುವ ಅನುಭವ ಒದಗಿಸಲು ಮ್ಯಾಜಿಕ್ ಟ್ವಿಸ್ಟ್ ಫೀಚರ್ ಅನ್ನು ಪರಿಚಯಿಸಲಾಗಿದೆ.

ಏಥರ್ ಎನರ್ಜಿಯ ಮುಖ್ಯ ಬಿಸಿನೆಸ್ ಅಧಿಕಾರಿ ರವನೀತ್ ಎಸ್ ಫೋಕೆಲಾ(Ravneet S Phokela) ಬಿಡುಗಡೆ ಕುರಿತು ಮಾತನಾಡಿ , “ಹೊಸ ಏಥರ್ 450 ಅತಿ ಹೆಚ್ಚು ಕಾರ್ಯಕ್ಷಮತೆ ಒದಗಿಸಲಿದೆ. ಹಲವಾರು ವರ್ಷಗಳಿಂದ ನಾವು 450 ವೇರಿಯೆಂಟ್‌ನ ಕಾರ್ಯಕ್ಷಮತೆ ಹೆಚ್ಚಿಸುವ ಕಡೆಗೆ ನಿರಂತರವಾಗಿ ಗಮನ ಹರಿಸಿದ್ದೇವೆ. ಅದರಲ್ಲೂ ಸಾಫ್ಟ್‌ ವೇರ್ ಮತ್ತು ಹಾರ್ಡ್‌ವೇರ್ ಎರಡರಲ್ಲೂ ಸುಧಾರಣೆಗಳನ್ನು ಮಾಡಿದ್ದೇವೆ. ಅದರ ಫಲವಾಗಿ ಈಗ 2025 ಏಥರ್ 450 ಅನಾವರಣ ಮಾಡಿದ್ದು, ಇದರಲ್ಲಿ ನಾವು ಸುರಕ್ಷತೆ ಹೆಚ್ಚಿಸಿದ್ದೇವೆ,ʼʼ ಎಂದು ಹೇಳಿದ್ದಾರೆ.

ಮಲ್ಟಿ -ಮೋಡ್ ಟ್ರಾಕ್ಷನ್ ಕಂಟ್ರೋಲ್‌ನಂಥ ಫೀಚರ್‌ಗಳನ್ನು ನೀಡುತ್ತಿದ್ದೇವೆ. ಸಾಮಾನ್ಯವಾಗಿ ಹೈ ಎಂಡ್ ಮೋಟಾರ್‌ ಸೈಕಲ್‌ ಗಳಲ್ಲಿ ಕಂಡುಬರುವ ಈ ಫೀಚರ್ ಅನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಮತ್ತು ಸ್ಕೂಟರ್‌ಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸುತ್ತಿದ್ದೇವೆ. ಈ ಫೀಚರ್ ಸವಾರನಿಗೆ ಸುಲಭವಾಗಿ ಪ್ರಯಾಣಿಸಲು ನೆರವಾಗುತ್ತದೆ. ವಾಹನದ ಮೇಲೆ ನಿಯಂತ್ರಣ ಹಾಗೂ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು ನುಡಿದರು.

450 ಅಪೆಕ್ಸ್ ಮತ್ತು ರಿಝ್ತಾ ಸ್ಕೂಟರ್‌ಗಳಲ್ಲಿ ನಾವು ಈ ಹಿಂದೆಯೇ ಮ್ಯಾಜಿಕ್ ಟ್ವಿಸ್ಟ್ ಅನ್ನು ಪರಿಚಯಿಸಿದ್ದೆವು. ಇದೀಗ 450ಎಕ್ಸ್ ಸ್ಕೂಟರ್ ನಲ್ಲಿಯೂ ಮ್ಯಾಜಿಕ್ ಟ್ವಿಸ್ಟ್ ಫೀಚರ್ ಪರಿಚಯಿಸುತ್ತಿದ್ದೇವೆ. ಈ ಹೊಸ ಅಪ್ ಡೇಟ್ ಗಳು, ಫೀಚರ್ ಗಳು ದೇಶಾದ್ಯಂತ ಇರುವ ಸ್ಕೂಟರ್ ಉತ್ಸಾಹಿಗಳಿಗೆ, ರೈಡರ್ ಗಳಿಗೆ ಅತ್ಯುತ್ತಮ ಹಾಗೂ ಹೆಚ್ಚು ಸುಧಾರಿತ ರೈಡಿಂಗ್ ಅನುಭವ ಒದಗಿಸುತ್ತದೆ ಎಂಬ ನಂಬಿಕೆ ನಮಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏನಿದು ಫೀಚರ್‌?

2025 ಏಥರ್ 450ಎಕ್ಸ್ ಮತ್ತು ಏಥರ್ 450 ಅಪೆಕ್ಸ್ ಮಾಡೆಲ್‌ಗಳು ಮಲ್ಟಿ- ಮೋಡ್ ಟ್ರಾಕ್ಷನ್ ಕಂಟ್ರೋಲ್‌ ಫೀಚರ್ ಹೊಂದಿವೆ. ಸ್ಕೂಟರ್ ಸ್ಕಿಡ್‌ ಆಗಿ ಬೀಳುವುದನ್ನು ಈ ಫೀಚರ್ ತಡೆಯಲಿದೆ. ಇದನ್ನು ರೈಡರ್‌ಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಸಲುವಾಗಿಯೇ ವಿನ್ಯಾಸಗೊಳಿಸಲಾಗಿದೆ. ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆ ಹಿಂದಿನ ಚಕ್ರದ ವೇಗವನ್ನು ಮುಂಭಾಗದ ಚಕ್ರದ ವೇಗದೊಂದಿಗೆ ಸರಿ ಹೊಂದಿಸುತ್ತದೆ ಮತ್ತು ರೈಡರ್‌ಗೆ ಉತ್ತಮ ಸ್ಥಿರತೆ ಒದಗಿಸುತ್ತದೆ.

ರೈನ್ ಮೋಡ್, ರೋಡ್ ಮೋಡ್ ಮತ್ತು ರಾಲಿ ಮೋಡ್ ಈ ಮೂರು ವಿಭಿನ್ನ ಮೋಡ್‌ ಗಳಲ್ಲಿ ಒಂದು ಮೋಡ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಈ ಪ್ರತಿಯೊಂದೂ ಮೋಡ್ ಅನ್ನು ಕೂಡ ನಿರ್ದಿಷ್ಟ ರೈಡಿಂಗ್ ಸನ್ನಿವೇಶಗಳಿಗಾಗಿ ರೂಪಿಸಲಾಗಿದೆ. ರೈನ್ ಮೋಡ್ ಹೆಚ್ಚಿನ ಸುರಕ್ಷತೆಗೆ ಆದ್ಯತೆ ನೀಡುತ್ತದೆ, ತೇವ ಹೊಂದಿರುವ ಮತ್ತು ಜಾರುವಂತಹ ಪ್ರದೇಶಗಳಲ್ಲಿ ಹೆಚ್ಚು ಗ್ರಿಪ್ ನೀಡಿ ಸ್ಲಿಪ್ ಆಗುವುದನ್ನು ಕಡಿಮೆ ಮಾಡುತ್ತದೆ. ರೋಡ್ ಮೋಡ್ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಎರಡನ್ನೂ ಒದಗಿಸುತ್ತಿದ್ದು, ದೈನಂದಿನ ಬಳಕೆಗೆ ಸೂಕ್ತವಾಗಿದೆ. ರಾಲಿ ಮೋಡ್ ಅನ್ನು ಆಫ್-ರೋಡ್ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸ್ಲಿಪ್ ಆಗದಂತೆ ಹೆಚ್ಚು ನಿಯಂತ್ರಣ ಒದಗಿಸುತ್ತದೆ.

ರೇಂಜ್‌ ಹೆಚ್ಚಳ

ರೈಡಿಂಗ್ ಅನುಭವ ಇನ್ನಷ್ಟು ಸುಧಾರಿಸಲು ಹೆಚ್ಚು ರೇಂಜ್ ಒದಗಿಸುವುದರ ಕಡೆಗೆ ಏಥರ್ ಗಮನ ಕೇಂದ್ರೀಕರಿಸಿದೆ. 2025 ಏಥರ್ 450 ನಲ್ಲಿ ಎಂಆರ್‌ಎಫ್‌ ಕಂಪನಿ ಜೊತೆಗೆ ಅಭಿವೃದ್ಧಿಪಡಿಸಿದ ಮಲ್ಟಿ ಕಾಂಪೌಂಡ್ ಟೈರ್‌ಗಳನ್ನು ಪರಿಚಯಿಸಿದೆ. ಇದು ಬ್ರೇಕಿಂಗ್ ಸಂದರ್ಭದಲ್ಲಿ ವಿದ್ಯುತ್ ನಷ್ಟ ಆಗುವುದನ್ನು ತಡೆಯುತ್ತದೆ ಮತ್ತು ಹೆಚ್ಚು ರೇಂಜ್ ಒದಗಿಸಲು ನೆರವಾಗುತ್ತದೆ.

ಏಥರ್ 450ಎಕ್ಸ್ 3.7kWh (ಐಡಿಸಿ ರೇಂಜ್ 161 ಕಿಮೀಗಳು) ಮತ್ತು 450 ಅಪೆಕ್ಸ್ (ಐಡಿಸಿ ರೇಂಜ್ 157 ಕಿಮೀಗಳು) ಸ್ಕೂಟರ್ ಗಳು 130 ಕಿಮೀವರೆಗಿನ ಟ್ರೂ ರೇಂಜ್ ಅನ್ನು ಒದಗಿಸುತ್ತವೆ. 450ಎಕ್ಸ್ 2.9 kWh (ಐಡಿಸಿ ರೇಂಜ್ 126 ಕಿಮೀ ಗಳು) ಮತ್ತು ಏಥರ್ 450ಎಸ್ (ಐಡಿಸಿ ರೇಂಜ್ 122 ಕಿಮೀ ಗಳು) ಸಹ ಈಗ 105 ಕಿಮೀಗಳವರೆಗಿನ ಟ್ರೂ ರೇಂಜ್ ಒದಗಿಸುತ್ತವೆ.

ಬೆಲೆ ಎಷ್ಟು?

2025 ಏಥರ್ 450ಎಸ್ ಬೆಲೆ ₹1,29,999 (ಎಕ್ಸ್ ಶೋ ರೂಂ ಬೆಂಗಳೂರು). 2.9 kWh ಬ್ಯಾಟರಿಯ 2025 ಏಥರ್ 450ಎಕ್ಸ್ ಬೆಲೆ ₹1,46,999 (ಎಕ್ಸ್ ಶೋ ರೂಂ ಬೆಂಗಳೂರು) ಮತ್ತು 3.7 kWh ಬ್ಯಾಟರಿಯ 2025 ಏಥರ್ 450ಎಕ್ಸ್ ನ ಆರಂಭಿಕ ಬೆಲೆ ₹1,56,999 (ಎಕ್ಸ್ ಶೋ ರೂಂ ಬೆಂಗಳೂರು). 450 ಅಪೆಕ್ಸ್ ಈಗ ₹1,99,999 (ಎಕ್ಸ್ ಶೋ ರೂಂ ಬೆಂಗಳೂರು, ಪ್ರೊ ಪ್ಯಾಕ್ ಒಳಗೊಂಡು) ಬೆಲೆಯಲ್ಲಿ ದೊರೆಯುತ್ತದೆ

Tags: Aether 450-LaunchAether Energy LimitedRavneet S Phokela
SendShareTweet
Previous Post

(Maternal Death case )ಬಾಣಂತಿಯರ ಸಾವಿಗೆ ವೈದ್ಯರೇ ಕಾರಣ: ಶಾಸಕಿ

Next Post

(CT.Ravi case)ಸಿಐಡಿ ವಿಚಾರಣೆಯ ನಂತರ ವಿಪ ಸದಸ್ಯ ಸಿ.ಟಿ. ರವಿ ಹೇಳಿದ್ದೇನು?

Related Posts

ಆಸ್ತಿ ವಿವಾದ ; ಕಲ್ಲಿನಿಂದ ಜಜ್ಜಿ ತಾಯಿ-ಮಗನ ಬರ್ಬರ ಹತ್ಯೆ!
ರಾಜ್ಯ

ಆಸ್ತಿ ವಿವಾದ ; ಕಲ್ಲಿನಿಂದ ಜಜ್ಜಿ ತಾಯಿ-ಮಗನ ಬರ್ಬರ ಹತ್ಯೆ!

ಸೈಟ್ ಕ್ಲೀನಿಂಗ್ ವೇಳೆ ಶವ ಪತ್ತೆ ; ಜಿಬಿಎ ನಿಯಮದಿಂದ ಭೀಕರ ಕೊಲೆ ರಹಸ್ಯ ಬಯಲು!
ಬೆಂಗಳೂರು

ಸೈಟ್ ಕ್ಲೀನಿಂಗ್ ವೇಳೆ ಶವ ಪತ್ತೆ ; ಜಿಬಿಎ ನಿಯಮದಿಂದ ಭೀಕರ ಕೊಲೆ ರಹಸ್ಯ ಬಯಲು!

ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ : ಟೆಲಿಗ್ರಾಂ ಗ್ರೂಪ್ ನಡೆಸುತ್ತಿದ್ದ ಯುವಕ ಚಿಕ್ಕಬಳ್ಳಾಪುರದಲ್ಲಿ ಬಂಧನ!
ಚಿಕ್ಕಬಳ್ಳಾಫುರ

ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ : ಟೆಲಿಗ್ರಾಂ ಗ್ರೂಪ್ ನಡೆಸುತ್ತಿದ್ದ ಯುವಕ ಚಿಕ್ಕಬಳ್ಳಾಪುರದಲ್ಲಿ ಬಂಧನ!

ಬಿಜೆಪಿ ಉಸ್ತುವಾರಿ ಬದಲಾವಣೆ ಬೆನ್ನಲ್ಲೇ ದೆಹಲಿಗೆ ಹಾರಿದ ವಿಜಯೇಂದ್ರ..!
ರಾಜಕೀಯ

ಬಿಜೆಪಿ ಉಸ್ತುವಾರಿ ಬದಲಾವಣೆ ಬೆನ್ನಲ್ಲೇ ದೆಹಲಿಗೆ ಹಾರಿದ ವಿಜಯೇಂದ್ರ..!

ಮುಳಬಾಗಿಲಿನಲ್ಲಿ ಹೆಚ್ಚಾದ ಕಳ್ಳರ ಹಾವಳಿ.. ಸಿಸಿಟಿವಿ ದೃಶ್ಯಗಳು ವೈರಲ್‌!
ಕೋಲಾರ

ಮುಳಬಾಗಿಲಿನಲ್ಲಿ ಹೆಚ್ಚಾದ ಕಳ್ಳರ ಹಾವಳಿ.. ಸಿಸಿಟಿವಿ ದೃಶ್ಯಗಳು ವೈರಲ್‌!

ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿ : ಆಕಾಶ್ ಅಶೋಕ್ ಕುಮಾರ್ ಚಾಂಪಿಯನ್!
ಕ್ರೀಡೆ

ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿ : ಆಕಾಶ್ ಅಶೋಕ್ ಕುಮಾರ್ ಚಾಂಪಿಯನ್!

Next Post
(CT.Ravi case)ಸಿಐಡಿ ವಿಚಾರಣೆಯ ನಂತರ ವಿಪ ಸದಸ್ಯ ಸಿ.ಟಿ. ರವಿ ಹೇಳಿದ್ದೇನು?

(CT.Ravi case)ಸಿಐಡಿ ವಿಚಾರಣೆಯ ನಂತರ ವಿಪ ಸದಸ್ಯ ಸಿ.ಟಿ. ರವಿ ಹೇಳಿದ್ದೇನು?

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕ್ರಮ ಕೋರಿ ಸುಪ್ರೀಂಗೆ ಅರ್ಜಿ!

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕ್ರಮ ಕೋರಿ ಸುಪ್ರೀಂಗೆ ಅರ್ಜಿ!

ಸಿಎಸ್‌ಕೆ ಹೊಸ ಕೋಚ್‌ ಝಹೀರ್‌ ಖಾನ್‌ ಪ್ಲ್ಯಾನ್‌ ಏನು? ‘ಬ್ರ್ಯಾಂಡ್‌ ರಕ್ಷಿಸುವುದೇ ಮೊದಲ ಗುರಿ’

ಸಿಎಸ್‌ಕೆ ಹೊಸ ಕೋಚ್‌ ಝಹೀರ್‌ ಖಾನ್‌ ಪ್ಲ್ಯಾನ್‌ ಏನು? ‘ಬ್ರ್ಯಾಂಡ್‌ ರಕ್ಷಿಸುವುದೇ ಮೊದಲ ಗುರಿ’

108 ದೇಶಗಳು, ಒಂದೇ ಉಪಗ್ರಹ : ಜಾಗತಿಕ ದಾಖಲೆ ಬರೆದ ವಿದ್ಯಾರ್ಥಿನಿಯರ ‘ಶಕ್ತಿಸ್ಯಾಟ್’ ಬಾಹ್ಯಾಕಾಶ ಯೋಜನೆ!

108 ದೇಶಗಳು, ಒಂದೇ ಉಪಗ್ರಹ : ಜಾಗತಿಕ ದಾಖಲೆ ಬರೆದ ವಿದ್ಯಾರ್ಥಿನಿಯರ ‘ಶಕ್ತಿಸ್ಯಾಟ್’ ಬಾಹ್ಯಾಕಾಶ ಯೋಜನೆ!

21 ವರ್ಷ ತುಂಬಿದ ಬಳಿಕ ಪ್ರೇಯಸಿಯನ್ನು ಮದುವೆಯಾಗು ಎಂದಿದ್ದಕ್ಕೆ ತಂದೆಯನ್ನೇ ಗುಂಡಿಟ್ಟು ಕೊಂದ ಪುತ್ರ!

21 ವರ್ಷ ತುಂಬಿದ ಬಳಿಕ ಪ್ರೇಯಸಿಯನ್ನು ಮದುವೆಯಾಗು ಎಂದಿದ್ದಕ್ಕೆ ತಂದೆಯನ್ನೇ ಗುಂಡಿಟ್ಟು ಕೊಂದ ಪುತ್ರ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕ್ರಮ ಕೋರಿ ಸುಪ್ರೀಂಗೆ ಅರ್ಜಿ!

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕ್ರಮ ಕೋರಿ ಸುಪ್ರೀಂಗೆ ಅರ್ಜಿ!

ಸಿಎಸ್‌ಕೆ ಹೊಸ ಕೋಚ್‌ ಝಹೀರ್‌ ಖಾನ್‌ ಪ್ಲ್ಯಾನ್‌ ಏನು? ‘ಬ್ರ್ಯಾಂಡ್‌ ರಕ್ಷಿಸುವುದೇ ಮೊದಲ ಗುರಿ’

ಸಿಎಸ್‌ಕೆ ಹೊಸ ಕೋಚ್‌ ಝಹೀರ್‌ ಖಾನ್‌ ಪ್ಲ್ಯಾನ್‌ ಏನು? ‘ಬ್ರ್ಯಾಂಡ್‌ ರಕ್ಷಿಸುವುದೇ ಮೊದಲ ಗುರಿ’

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat