ಬೆಂಗಳೂರು : ನಿರಂತರ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೆಚ್ಚಾಗಿವೆ ಎಂದು ಬಿಬಿಎಂಪಿ ಹೇಳಿದೆ. ರಸ್ತೆ ಗುಂಡಿ ಮುಚ್ಚೋ ವಿಚಾರದಲ್ಲಿ ಬಿಬಿಎಂಪಿ ಮತ್ತೆ ಸುಳ್ಳು ಲೆಕ್ಕ ನೀಡಿದೆಯೇ ಎಂಬ ಅನುಮಾನ ಶುರುವಾಗಿದೆ. ಆದರೆ ನಗರದಲ್ಲಿ ರಸ್ತೆ ಗುಂಡಿಗಳು ಬಾಯ್ತೆರೆದು ನಿಂತಿವೆ.
ಸದ್ಯ, ಮಳೆಯಿಂದ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆ ವಿರಾಮ ಹೇಳಿದೆ. ಮಳೆ ಬರುತ್ತಿರುವುದರಿಂದ ಗುಂಡಿ ಮುಚ್ಚುವುದಕ್ಕೆ ಸಾದ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಅಲ್ಲದೇ ನಗರದಲ್ಲಿ ಇರುವುದು 12721 ರಸ್ತೆ ಗುಂಡಿ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವುದು ಕೇವಲ 4324 ಗುಂಡಿ ಇದೆ.
ಜುಲೈ ಅಂತ್ಯದವರೆಗೂ ಬಿಬಿಎಂಪಿ 12721 ರಸ್ತೆ ಗುಂಡಿ ಮುಚ್ಚಲಾಗಿದೆ ಬಿಬಿಎಂಪಿ ಹೇಳಿದೆ. ಯಲಹಂಕ, ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಹೆಚ್ಚು ಗುಂಡಿ ಎಂದು ಹೇಳಿದೆ. ಇನ್ನು ಮಳೆ ನಿಂತ ಕೂಡಲೇ ರಸ್ತೆ ಗುಂಡಿ ಮುಚ್ಚಿ ಎಂದು ವಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.



















