ನೆಲಮಂಗಲ : ಕೆನಡಾದಲ್ಲಿ ನೆಲಮಂಗಲದ ತ್ಯಾಮಗೊಂಡ್ಲು ನಿವಾಸಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣ ಸಂಬಂಧ ಆರೋಪಿಯ ಪೋಟೋವನ್ನು ಕೆನಡಾದ ಟೊರಂಟೊ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಕಳೆದ ತಿಂಗಳು ಕೆನಾಡದಲ್ಲಿ ಕೊಲೆಯಾಗಿದ್ದರು. ಚಂದನ್ ಕುಮಾರ್ ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿಕೊಂಡು ಅಲ್ಲಿನ ಕನ್ನಡಿಗರ ಸಂಘಟನೆಯ ಮೂಲಕ ಸಾಕಷ್ಟು ಹೆಸರು ಸಂಪಾದನೆ ಮಾಡಿಕೊಂಡಿದ್ದರು.
ಈ ನಡುವೆ ಕಳೆದ ತಿಂಗಳು ಕೆನಡಾದ ಟೊರಂಟೊ ನಗರದಲ್ಲಿ ಚಂದನ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದ. ಗುಂಡಿಟ್ಟು ಕೊಲೆ ಮಾಡಿರುವ ಆರೋಪಿ ವಿಚಾರದಲ್ಲಿ ಟೊರಂಟೊ ಪೊಲೀಸರು ಚಂದನ್ ಕುಮಾರ್ ಕೊಲೆಯ ಪ್ರೆಸ್ ಮೀಟ್ ಮಾಡಿದ್ದಾರೆ.
ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಪೋಟೋ ಬಿಡುಗಡೆ ಮಾಡಿದ್ದಾರೆ. ಟೊರಂಟೊ ಪೊಲೀಸರು, ಇಷಯಾ ಥಾಮಸ್ ಬಡ್ಗೇರ್ 19 ವರ್ಷ ಕೊಲೆ ಆರೋಪಿ ಎಂದು ಗುರುತಿಸಿದ್ದು, ಟೊರಂಟೊ ಪೊಲೀಸರಿಂದ ವಾಂಟೆಡ್ ಲಿಸ್ಟ್ ಫೋಟೋ ರಿಲೀಸ್ ಮಾಡಿದ್ದಾರೆ. ಸದ್ಯ ಕೊಲೆ ಆರೋಪಿಯನ್ನ ಇನ್ನೂ ಹುಡುಕಾಟ ನಡೆಸುತ್ತಿರುವ ಟೊರಂಟೊ ಪೊಲೀಸರು, ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ ; ಖಮೇನಿ ಹತ್ಯೆ ಕುರಿತು ಪೋಸ್ಟ್ ಹಾಕಿದ್ದ ಯುವಕನ ಮೇಲೆ ಹಲ್ಲೆ!


















