ಹುಬ್ಬಳ್ಳಿ:ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಧ್ಯರಾತ್ರಿ ನಡೆಸಿದ ಸಂಧಾನ ಸಭೆ ಸಕ್ಸಸ್ ಆಗಿದೆ. ಹುಬ್ಬಳ್ಳಿಯ ಐಬಿಯಲ್ಲಿ ಮಧ್ಯರಾತ್ರಿ ಈ ರೈತರ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಜಗದೀಶ್ ಶೆಟ್ಟರ್, ಮಹೇಶ್ ಟೆಂಗಿನಕಾಯಿ ಹಾಗೂ ಸಿಸಿ ಪಾಟೀಲ್ ಭಾಗವಹಿಸಿದ್ದರು.
ರೈತ ಮುಖಂಡರಾದ ಚೂನಪ್ಪ ಪೂಜಾರಿ ಮತ್ತು ಶಶಿಕಾಂತ ಸೇರಿ ಒಟ್ಟು ಎಂಟು ರೈತರು ಪಾಲ್ಗೊಂಡಿದ್ದರು. ಸಭೆಯಲ್ಲಿ ರೈತ ನಾಯಕರ ಜೊತೆ ಸಂಧಾನದ ಸುದೀರ್ಘ ಮಾತುಕತೆ ನಡೆಸಲಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸಲು ಸಚಿವರು ಇದೇ ವೇಳೆ ಕಾಲಾವಕಾಶಕ್ಕೆ ಮನವಿ ಮಾಡಿದ್ದಾರೆ.



















