ಟೈಗರ್ ಶ್ರಾಫ್ ಬಾಲಿವುಡ್ನ ಪ್ರಮುಖ ಯುವ ನಟ ಮತ್ತು ಸಾಹಸ ಕಲಾವಿದರಾಗಿದ್ದಾರೆ. ಇವರು ಸದ್ಯ ಬಾಲಿವುಡ್ನಲ್ಲಿ ಅದ್ಭುತ ನೃತ್ಯಗಾರನಾಗಿ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಟೈಗರ್ ಶ್ರಾಫ್ ಅವರ ಜನನದ ಅಸಲಿ ಹೆಸರು ಜೈ ಹೇಮಂತ್ ಶ್ರಾಫ್ ಎಂದಾಗಿದೆ. ಇವರು 2 ಮಾರ್ಚ್ 1990 ರಂದು ಮುಂಬೈನಲ್ಲಿ ಜನಿಸಿದರು.
ಇವರು ಬಾಲಿವುಡ್ನ ಹಿರಿಯ ಹಾಗೂ ಖ್ಯಾತ ನಟ ಜಾಕಿ ಶ್ರಾಫ್ ಅವರ ಮಗನಾಗಿದ್ದಾರೆ. ಈತನ ತಾಯಿ ಬಾಲಿವುಡ್ ಚಿತ್ರ ನಿರ್ಮಾಪಕಿ ಆಯೇಷಾ ದತ್ ಆಗಿದ್ದಾರೆ. ಟೈಗರ್ ಶ್ರಾಫ್ ಅವರು ಮಾರ್ಷಲ್ ಆರ್ಟ್ಸ್ನಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಇವರು ತೇಕ್ವಾಂಡೋ ಸಮರ ಕಲೆಯಲ್ಲಿ 5ನೇ ಡಿಗ್ರಿ ಬ್ಲಾಕ್ ಬೆಲ್ಟ್ ಕೂಡ ಪಡೆದಿದ್ದಾರೆ. ತಮ್ಮ ವಿಶಿಷ್ಟ ಆಕ್ಷನ್ ಸ್ಟಂಟ್ ಮತ್ತು ಕಠಿಣ ಫಿಟ್ನೆಸ್ ಗಾಗಿ ಇವರು ಅತ್ಯಂತ ಫೇಮಸ್ ಆಗಿದ್ದಾರೆ. ಚಿತ್ರರಂಗದಲ್ಲಿ ಸದ್ಯಕ್ಕೆ ಅತೀ ದೊಡ್ಡ ಹೆಸರನ್ನು ಗಳಿಸಿದ ನಟನಾಗಿ ಇವರು ಹೊರಹೊಮ್ಮಿದ್ದಾರೆ.



















