ಹುಬ್ಬಳ್ಳಿಯಲ್ಲಿ ನಿನ್ನೆ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ಬಲಿಯಾದ ಬೆನ್ನಲ್ಲೇ ಈಗ ಮತ್ತೊಂದು ಅವಘಡ ಸಂಭವಿಸಿದೆ. ಉಣಕಲ್ ಬಳಿಯ ಬಿಆರ್ಟಿಎಸ್ ರಸ್ತೆಯಲ್ಲಿ ಮಾಂಜಾ ದಾರ ಸಿಲುಕಿ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದು, ಆತನ ಮೂಗು ಕೊಯ್ದು ಹೋಗಿದೆ. ಗಾಯಾಳು ಯುವಕನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.
ಈ ಸರಣಿ ದುರಂತಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಹುಬ್ಬಳ್ಳಿ ಪೊಲೀಸ್ ಇಲಾಖೆ ಮಾಂಜಾ ದಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಗುರುವಾರ ಅಂಗಡಿಗಳ ಮೇಲೆ ಭರ್ಜರಿ ದಾಳಿ ನಡೆಸಿರುವ ಖಾಕಿ ಪಡೆ, ಮಾಂಜಾ ದಾರ ತಯಾರಿಕಾ ಕೇಂದ್ರಗಳಿಂದ 500ಕ್ಕೂ ಹೆಚ್ಚು ರೋಲ್ಗಳನ್ನು ವಶಕ್ಕೆ ಪಡೆದಿದೆ.



















