ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಬೆಂಗಳೂರಿನಿಂದ ಹೊಳೆನರಸೀಪುರದ ವರೆಗೆ ನಡೆಯಲಿದೆ. ಅಂತಿಮ ಯಾತ್ರೆ ಮಾರ್ಗ ಮಧ್ಯೆ 10 ಕಡೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೆಲವೇ ಹೊತ್ತಲ್ಲಿ ಬೆಂಗಳೂರಿನಿಂದ ಅಂತಿಮ ಯಾತ್ರೆ ಹೊರಡಲಿದೆ.
ಹಾಸನ ಜಿಲ್ಲೆಯ ಹರದನಹಳ್ಳಿಯ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಡೆಯಲಿರುವ ಜಾಗವನ್ನು ಪುತ್ರ, ಶಾಸಕ ಹೆಚ್.ಡಿ. ರೇವಣ್ಣ ಪರಿಶೀಲನೆ ಮಾಡಿದ್ದು, ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ.
‘ತಾಯಿ ಚೆನ್ನಮ್ಮ ನನಗೆ ದೇವತೆ ಸಮಾನ. ನನ್ನ ದೇವರನ್ನೇ ಕಳೆದುಕೊಂಡೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಎಷ್ಟೋ ಜನರಿಗೆ ಅನ್ನ ಹಾಕಿದ ಕೈಅವರದು. ಕೊನೆಯದಾಗಿ ತಿರುಪತಿ ಪ್ರಸಾದ ಕೊಟ್ಟು ಮಾತನಾಡಿಸಿದ್ದೆ. ವೈದ್ಯರು ನಿನ್ನೆ ಬೆಳಗ್ಗೆ ಚೆನ್ನಮ್ಮ ಗುಣಮುಖ ಆಗ್ತಾರೆ ಎಂದಿದ್ದರು. ಆದರೆ ಅವರು ಬದುಕಿ ಬರಲಿಲ್ಲ ಎಂದು ಹೇಳುತ್ತಲೇ ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ರೇವಣ್ಣ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ : ಅಜ್ಜಿ ನಿಧನದ ಸುದ್ದಿ ಕೇಳಿ ಜೈಲಲ್ಲೇ ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್ ರೇವಣ್ಣ



















