ಚಿಕ್ಕಮಗಳೂರು : ಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ IT ಕಂಪನಿಯ ಉದ್ಯೋಗಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದ ಬಳಿ ನಡೆದಿದೆ.
ಗದಗ ಮೂಲದ ಅಭಿಷೇಕ್(27) ಸಾವನ್ನಪ್ಪಿದ ಯುವಕ. ಈತ ಬೆಂಗಳೂರಿನ IT ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸ್ನೇಹಿತನ ಮದುವೆಗಾಗಿ ಚಿಕ್ಕಮಗಳೂರಿಗೆ ಬಂದಿದ್ದ ಅಭಿಷೇಕ್, ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ. ಬಳಿಕ ಸ್ನೇಹಿತರ ಜೊತೆ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ವೇಳೆ ನಾಪತ್ತೆಯಾಗಿದ್ದ.
ಬಳಿಕ ಅಭಿಷೇಕ್‌ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಟ ನಡೆಸಿದ್ದು, ಇಂದು ಬನ್ನೂರು ಗ್ರಾಮ ಸಮೀಪದ ಭದ್ರಾ ನದಿಯಲ್ಲಿ ಅಭಿಷೇಕ್ ಮೃತ ದೇಹ ಪತ್ತೆಯಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ತಾಯಿಯ ಪ್ರೀತಿಯ ದೇವಸ್ಥಾನದಲ್ಲಿ ಸುಖ ನಿದ್ರೆಗೆ ಜಾರಿದ ಮಗ.. ಬಹು ಭಾಷಾ ನಟ ಪ್ರಭುದೇವ ವಿಡಿಯೋ ವೈರಲ್


















