ಬೆಂಗಳೂರು : ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ಬೆಂಗಳೂರಿನಲ್ಲೇ ಇರುವ ಇನ್ ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಬಯಾಲಜಿ ಆ್ಯಂಡ್ ರಿ-ಜನರೇಟಿವ್ ಮೆಡಿಸಿನ್ ಸಂಸ್ಥೆಯಲ್ಲಿ (InStem Recruitment 2026) ಖಾಲಿ ಇರುವ 14 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಗಳ ಸಂಕ್ಷಿಪ್ತ ಮಾಹಿತಿ
ನೇಮಕಾತಿ ಸಂಸ್ಥೆ: ಇನ್ ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಬಯಾಲಜಿ ಆ್ಯಂಡ್ ರಿ-ಜನರೇಟಿವ್ ಮೆಡಿಸಿನ್ (InStem)
ಹುದ್ದೆಗಳ ಹೆಸರು: ಸೀನಿಯರ್ ಟೆಕ್ನಿಕಲ್ ಆಫೀಸರ್ ಇತ್ಯಾದಿ
ಒಟ್ಟು ಹುದ್ದೆಗಳು: 14
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 23
5 ಟೆಕ್ನಿಕಲ್ ಆಫೀಸರ್, ಸೀನಿಯರ್ ಟೆಕ್ನಿಕಲ್ ಆಫೀಸರ್, 3 ಮ್ಯಾನೇಜ್ ಮೆಂಟ್ ಅಸಿಸ್ಟಂಟ್ ಹಾಗೂ 4 ಜೂನಿಯರ್ ಮ್ಯಾನೇಜ್ ಮೆಂಟ್ ಅಸಿಸ್ಟಂಟ್ ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ 2 ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಬಿ.ಇ, ಬಿ.ಟೆಕ್, ಪದವಿ, ಡಿಪ್ಲೋಮಾ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಸಂದರ್ಶನಕ್ಕೆ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ instem.res.in ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕು
ಹುದ್ದೆಗಳ ಕುರಿತ ಅಧಿಸೂಚನೆ ಓದಬೇಕು
ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಬೇಕು
ಅರ್ಜಿ ನಮೂನೆಯನ್ನು ತಪ್ಪಿಲ್ಲದೆ ಭರ್ತಿ ಮಾಡಬೇಕು
ಆನ್ ಲೈನ್ ಮೂಲಕವೇ ಶುಲ್ಕ ಪಾವತಿ ಮಾಡಬೇಕು
ಅರ್ಜಿ ಸಲ್ಲಿಸಿ, ಸಬ್ ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು
ಇದನ್ನೂ ಓದಿ : ದೆಹಲಿ ಪರ ಮತ್ತೆ ಕಣಕ್ಕಿಳಿಯಲಿದ್ದಾರಾ ಕೊಹ್ಲಿ? ರೋಹನ್ ಜೇಟ್ಲಿ ಮಹತ್ವದ ಅಪ್ಡೇಟ್



















