ನವದೆಹಲಿ: ಎಲ್ ಒಸಿಯಲ್ಲಿ ಪಾಕಿಸ್ತಾನದ ಸೇನೆ ಭಾರತೀಯ ನಾಗರಿಕರ ಮೇಲೆ ದಾಳಿ ನಡೆಸಿ 16 ಜನರನ್ನು ಕೊಂದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ನಲ್ಲಿ (Lahore) ಪಾಕಿಸ್ತಾನದ ವಾಯು ರಕ್ಷಣಾ ಮೂಲಸೌಕರ್ಯದ ಮೇಲೆ ದಾಳಿ ನಡೆಸಿ ನಾಶಪಡಿಸಿತ್ತು. ಚೀನಾ ನಿರ್ಮಿತ ಕ್ಷಿಪಣಿಯನ್ನೂ ಹೊಡೆದುರುಳಿಸಿತ್ತು. ಸಂಜೆಯಾಗುತ್ತಿದ್ದಂತೆ ಪ್ರತಿಕಾರಕ್ಕೆ ಇಳಿದ ಪಾಪಿ ಪಾಕ್, ಜಮ್ಮುವಿನಲ್ಲಿ ಡ್ರೋನ್ ದಾಳಿಗೆ ಯತ್ನಿಸಿತ್ತು. ಆದರೆ, ಭಾರತೀಯ ಸೇನೆ 8 ಪಾಕ್ ಡ್ರೋನ್ಗಳನ್ನು ಹೊಡೆದುರುಳಿಸಿದೆ.
ತಕ್ಕ ಪಾಠ ಕಲಿಸಲು ಮುಂದಾಗಿರುವ ಭಾರತ ಇದೀಗ ಮತ್ತೆ ಪಾಕಿಸ್ತಾನದೊಳಗೆ ನುಗ್ಗಿ ಹೊಡೆದಿದೆ. ಲಾಹೋರ್, ಇಸ್ಲಮಾಬಾದ್ ಸೇರಿದಂತೆ ಹಲವೆಡೆ ವೈಮಾನಿಕ ದಾಳಿ ನಡೆಸಿದೆ. ಡ್ರೋನ್-ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಭಾರತ ಲಾಹೋರ್‌ಗೆ ದಾಳಿ ಮಾಡಿದೆ. ಆಗ ಪಾಕ್ ಹಲವೆಡೆ ಕ್ಷಿಪಣಿ ಹಾರಿಸಿದೆ. ಅವುಗಳನ್ನು ಭಾರತ ನಾಶ ಮಾಡಿದೆ. ಸದ್ಯ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಗಿದೆ.
ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಪಾಕಿಸ್ತಾನದ 3 ಎಡಬ್ಲ್ಯುಎಸಿಎಸ್ ಅನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನದ ಲಾಹೋರ್, ಮುಲ್ತಾನ್, ಸರ್ಗೋಧಾ, ಫೈಸಲಾಬಾದ್‌ನಲ್ಲಿ ಉದ್ವಿಗ್ನತೆ ಅಧಿಕಗೊಂಡಿದೆ.
ಭಾರತ ಇದೇ ಮೊದಲ ಬಾರಿಗೆ ಪಾಕ್ ನ ರಾಜಧಾನಿಗೆ ಗುರಿಯಿಟ್ಟಿದೆ. ಮೊದಲ ಬಾರಿಗೆ ಇಸ್ಲಾಮಾಬಾದ್ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. 5 ನಗರಗಳ ಮೇಲೆ ಭಾರತ ದಾಳಿ ನಡೆಸಿದೆ.