ಬೆಂಗಳೂರು : ನೀವೇನಾದರೂ ಇತ್ತೀಚೆಗಷ್ಟೇ ಎಂಬಿಎ ಕೋರ್ಸ್ ಗೆ ಪ್ರವೇಶ ಪಡೆದಿದ್ದೀರಾ? ಹಾಗಾದರೆ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. IDFC ಫಸ್ಟ್ ಬ್ಯಾಂಕಿನಿಂದ ಎಂಬಿಎ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಘೋಷಣೆ ಮಾಡಲಾಗಿದೆ. ‘ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಎಂಬಿಎ ಪ್ರೋಗ್ರಾಂ-2026-28’ (IDFC First Bank MBA Scholarship Program 2026-28) ಎಂಬ ಯೋಜನೆ ಘೋಷಣೆ ಮಾಡಲಾಗಿದ್ದು, ಎಂಬಿಎ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವರ್ಷಕ್ಕೆ 1 ಲಕ್ಷ ರೂಪಾಯಿಯಂತೆ ಕೋರ್ಸ್ ಮುಗಿಯುವ 2 ವರ್ಷಗಳ ಅವಧಿಗೆ ಒಟ್ಟು 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?
- ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
- 2 ವರ್ಷಗಳ ಪೂರ್ಣಪ್ರಮಾಣದ ಎಂಬಿಎ ಕೋರ್ಸ್ ಗೆ ಪ್ರವೇಶ ಪಡೆದಿರಬೇಕು
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರಬೇಕು
- ಐಡಿಎಫ್ ಸಿ ಬ್ಯಾಂಕ್ ಉದ್ಯೋಗಿಯ ಮಕ್ಕಳಾಗಿರಬಾರದು
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಗಳನ್ನು ಸಲ್ಲಿಸಲು ಬಯಸುವವರು https://www.buddy4study.com/ ಗೆ ಭೇಟಿ ನೀಡಬೇಕು. ಮೊಬೈಲ್ ನಂಬರ್, ಒಟಿಪಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು. IDFC FIRST Bank MBA Scholarship 2026-28 ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು. ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 8 ಕೊನೆಯ ದಿನವಾಗಿದೆ.
ಯಾವ ದಾಖಲೆ ಸಲ್ಲಿಸಬೇಕು?
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಹಲವು ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಎಂಬಿಎಗೆ ಪ್ರವೇಶ ಪಡೆದಿರುವ ಪ್ರಮಾಣಪತ್ರ, ಶುಲ್ಕದ ರಶೀದಿ, ವಯಸ್ಸು ದೃಢೀಕರಿಸುವ ದಾಖಲೆ (ಜನನ ಪ್ರಮಾಣಪತ್ರ, 10ನೇ ತರಗತಿ ಉತ್ತೀರ್ಣರಾದ ಪ್ರಮಾಣಪತ್ರ, ಪಾಸ್ ಪೋರ್ಟ್ ಇತ್ಯಾದಿ), ಪೋಷಕರ ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ – ಐವರು ದುರ್ಮರಣ



















