ಬೆಂಗಳೂರು : ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಎಂಜಿಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅನುಕೂಲವಾಗುವಂತೆ ಐಡಿಎಫ್ ಸಿ ಫರ್ಸ್ಟ್ ಬ್ಯಾಂಕ್ (IDFC FIRST Bank) ಮಹತ್ವದ ಹೆಜ್ಜೆ ಇರಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಐಡಿಎಫ್ ಸಿ ಫರ್ಸ್ಟ್ ಬ್ಯಾಂಕ್ ಎಂಜಿನಿಯರಿಂಗ್ ಸ್ಕಾಲರ್‌ಶಿಪ್’ ಯೋಜನೆಯನ್ನು ಘೋಷಣೆ ಮಾಡಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಭಾರಿ ವರದಾನವಾಗಲಿದೆ.
ಬಿಇ ಅಥವಾ ಬಿ.ಟೆಕ್ ಕೋರ್ಸ್ ಗೆ ಪ್ರವೇಶ ಪಡೆದವರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿಯಂತೆ 4 ವರ್ಷಕ್ಕೆ 4 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಎಂಜಿನಿಯರಿಂಗ್ ಪದವಿ ಕನಸು ಕಾಣುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಮುಗ್ಗಟ್ಟು ಅಡ್ಡಿಯಾಗಬಾರದು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕೊನೆಯ ದಿನವಾಗಿದೆ.
ಅರ್ಹತೆಗಳೇನು?
- ವಿದ್ಯಾರ್ಥಿಯು ಭಾರತೀಯ ನಾಗರಿಕನಾಗಿರಬೇಕು.
- ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಇ / ಬಿ.ಟೆಕ್ ಪೂರ್ಣಕಾಲಿಕ ಕೋರ್ಸಿಗೆ ಪ್ರವೇಶ ಪಡೆದಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
- ವಿದ್ಯಾರ್ಥಿಯು ಬೇರೆ ಯಾವುದೇ ವಿದ್ಯಾರ್ಥಿವೇತನ ಅಥವಾ ಶುಲ್ಕ ವಿನಾಯಿತಿಯನ್ನು ಪಡೆಯುತ್ತಿರಬಾರದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಮೊದಲಿಗೆ https://www.buddy4study.com/page/idfc-first-bank-engineering-scholarship ವೆಬ್ ಸೈಟ್ ಗೆ ಭೇಟಿ ನೀಡಬೇಕು. ನೋಂದಣಿ ಮಾಡಿಕೊಂಡು, ಅರ್ಜಿ ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಕುಟುಂಬದ ಆದಾಯ ಪ್ರಮಾಣಪತ್ರ, ವಿಳಾಸದ ಪುರಾವೆ, ದ್ವಿತೀಯ ಪಿಯುಸಿ ಅಂಕಪಟ್ಟಿ ಹಾಗೂ ಬಿ.ಇ ಕೋರ್ಸಿಗೆ ಪ್ರವೇಶ ಪಡೆದ ಕಾಲೇಜು ರಶೀದಿ ಸಲ್ಲಿಸಬೇಕು.
ಇದನ್ನೂ ಓದಿ : ಕೇರಳದ ಕಾಜಿಯಾ ಲಿಜ್ ಮೆಜೊಗೆ ಮಿಸ್ ಯುನಿವರ್ಸ್ ಇಂಡಿಯಾ ಕಿರೀಟ!



















