ಮೈಸೂರು:ಕೆಟ್ಟ ಕೆಲಸ ಮಾಡಿ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡಲ್ಲ ಎಂದು ಕೆ.ಆರ್.ನಗರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಇನ್ನೊಬ್ಬರಿಗೆ ಕೇಡು ಬಯಸದೆ ಪೂಜೆ ಮಾಡಿದರೆ ಮಾತ್ರ ಒಳ್ಳೆಯದಾಗುತ್ತದೆ ಎಂದು ಹೇಳಿರುವ ಅವರು, ತಾವಿನ್ನೂ ಸಕ್ರಿಯ ರಾಜಕಾರಣದಲ್ಲೇ ಮುಂದುವರೆಯುವುದಾಗಿ ಘೋಷಿಸುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ತಾವು ರಾಜ್ಯದಲ್ಲಿ ಒಟ್ಟು 17 ಬಜೆಟ್ ಮಂಡಿಸಿದ್ದು, ಇದುವರೆಗೆ ಸಂಪೂರ್ಣ ದಾಖಲೆಗಳ ರಾಜಕಾರಣ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

















