ಹುಬ್ಬಳ್ಳಿ : ಪತ್ನಿಯನ್ನು ಹ*ತ್ಯೆಗೈದು ಮಗುವಿನ ಜೊತೆಗೆ ಪೊಲೀಸ್ ಠಾಣೆಗೆ ಬಂದು ಪತಿ ಶರಣಾಗಿರುವ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ತೈಸಿನ್ ಶಿಗ್ಗಾವಿ (27) ಕೊಲೆಯಾದ ಮಹಿಳೆ. ಇರ್ಫಾನ್ ತನ್ನ ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿ.
ಇರ್ಫಾನ್ ಪತ್ನಿಯ ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಚಾಕು ಇರಿದು ಬರ್ಬರವಗಿ ಹತ್ಯೆ ಮಾಡಿದ್ದಾನೆ. ಸಾಲವನ್ನು ಮರು ಪಾವತಿ ಮಾಡುವ ವಿಚಾರದಲ್ಲಿ ದಂಪತಿ ಪದೇ ಪದೇ ಜಗಳವಾಡುತ್ತಿದ್ದರು. ತಗೆದುಕೊಂಡು ಸಾಲವನ್ನು ದುಡಿದು ತೀರಿಸುವಂತೆ ಪತ್ನಿ ತೈಸಿನ್ ಪತಿಗೆ ಹೇಳುತ್ತಿದ್ದಳು.
ಪತ್ನಿಯ ಮಾನಸಿಕ ಕಿರಿಕಿರಿಗೆ ಬೇಸತ್ತು ಚಾಕು ಇರಿದು ಕೊಲೆ ಮಾಡಿದ್ದ ಆರೋಪಿ, ಕೆಲ ಹೊತ್ತು ತಲೆ ಮರೆಸಿಕೊಂಡಿದ್ದ. ಬಳಿಕ ತಾನೇ ಮಗುವಿನ ಜೊತೆಗೆ ಬಂದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಗೋಕುಲ್ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು, ಮಗುವಿನ ಜೊತೆಗೆ ರಕ್ತ ಸಿಕ್ತ ಸ್ಥಿತಿಯಲ್ಲೇ ಕೇಶ್ವಾಪುರ ಪೊಲೀಸ್ ಠಾಣೆಗೆ ಬಂದು ಪತಿ ಶರಣಾಗಿದ್ದಾನೆ. ಕೊಲೆ ಆರೋಪಿಯ ಈ ಭಯನಕ ವರ್ತನೆ ಕಂಡು ಪೊಲೀಸರು ಗಾಬರಿಯಾಗಿದ್ದಾರೆ. ಸದ್ಯ ಈ ಘಟನಾ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಗೆ ಡಿಸಿಪಿ ಮಹಾನಿಂಗ್ ನಂದಾಗಾವಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕಟ್ಟಡದ 4ನೇ ಫ್ಲೋರ್‌ನಿಂದ ಬಿದ್ದು ಪ್ರಾಣ ಬಿಟ್ಟ ವ್ಯಕ್ತಿ.. ಸಾವಿನ ಸುತ್ತ ಅನುಮಾನ!



















