ಬೆಂಗಳೂರು : ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ವತಿಯಿಂದ ಜ್ಙಾನ ಭಾರತಿ- ಭುವನೇಶ್ವರಿ ನಗರ ವಸತಿಯಲ್ಲಿ ಜ.25 ಭಾನುವಾರದಂದು ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಅಪರಾಹ್ನ 3:30ಕ್ಕೆ ಶೋಭಾಯಾತ್ರೆ ನಡೆಯಲಿದ್ದು, ಡೊಳ್ಳು ಕುಣಿತ, ಮಾತೆಯರ ಪೂರ್ಣ ಕುಂಭಗಳು ಚಂಡೆ ವಾದ್ಯಗಳೊಂದಿಗೆ ಮರಿಯಪ್ಪನಪಾಳ್ಯದ ಅಮ್ಮ ಆರ್ಚ್‌ನಿಂದ (ಶನೇಶ್ವರ ದೇವಸ್ಥಾನ) ಕೆಂಪೇಗೌಡ ಆಟದ ಮೈದಾನದವರೆಗೆ ಮೆರವಣಿಗೆ ಹೊರಡಲಿದೆ.
ಈ ಶೋಭಾಯಾತ್ರೆಯ ಬಳಿಕ ಕೆಂಪೇಗೌಡ ಆಟದ ಮೈದಾನ, ನಗೆಮನೆ ಹಿಂಭಾಗ, ಭುವನೇಶ್ವರಿ ನಗರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರ ಶಿಷ್ಯರು ಹಾಗೂ ಬೆಂಗಳೂರು ಶಾಖಾ ಮಠದ ಅಧ್ಯಕ್ಷರಾದ ಬ್ರಹ್ಮಚಾರಿ ಆತ್ಮನಿರತಾಮೃತ ಚೈತನ್ಯರು ಆಶೀರ್ವಚನ ನೀಡಲಿದ್ದಾರೆ. ಇದಾದನಂತರ ವಕ್ತಾರರಿಂದ ಹಿತನುಡಿಗಳು, ಯಕ್ಷಗಾನ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗವೂ ಇರುತ್ತದೆ.
ಈ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಸಾಮಾಜಿಕ ಕಾರ್ಯಕರ್ತ, ಮೈಕ್ರೋಬಯಾಲಜಿ ಪ್ರಾಧ್ಯಾಪಕರಾದ ಡಾ. ಪಿ.ಎಂ. ಗಿರಿಧರ ಉಪಾಧ್ಯಾಯ ಮತ್ತು ನಾಗರಬಾವಿಯ ಆಕ್ಸ್‌ಫರ್ಡ್ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ.ಎಸ್. ಎನ್. ಉಷಾ ರವೀಂದ್ರನಾಥ್ ಭಾಗಿಯಾಗಲಿದ್ದಾರೆ.
ಈ ಹಿಂದೂ ಸಮಾಜೋತ್ಸವವು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಅದು ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತವೆ ಎಂಬುದೇ ಕಾರ್ಯಕ್ರಮದ ಉದ್ದೇಶವಾಗಿದೆ.
ಇದನ್ನೂ ಓದಿ : ಉಡುಪಿ | ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರೇ ಗಮನಿಸಿ, ಇನ್ಮುಂದೆ ವಸ್ತ್ರ ಸಂಹಿತೆ ಜಾರಿ



















