ಕಾಲ್ತುಳಿತ ಪ್ರಕರಣಕ್ಕೆ ಸಂಬಂದ ದಿನಕ್ಕೊಂದು ಸುಳ್ಳುಗಳನ್ನ ಹೇಳುತ್ತಾ ಹೈಕಮಾಂಡ್ ಕಾಲ್ತುಳಿತಕ್ಕೆ ಸಿಎಂ ಒಳಗಾಗಿದ್ದಾರೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ತನಗೆ ತೊಂದರೆ ಆದಾಗೆಲ್ಲ ಕಾಂಗ್ರೆಸ್ ಜಾತಿಗಣತಿ ಬಳಸುತ್ತಿದೆ. ಈಗ ಜಾತಿಗಣತಿಯನ್ನು ಕಸದ ಬುಟ್ಟಿಗೆ ಹಾಕುವ ಕೆಲಸ ಮಾಡುತ್ತಿರುವುದು ಜನರಿಗೆ ಮಾಡುತ್ತಿರುವ ದ್ರೋಹ.
ಈಗ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯಗೆ ದೊಡ್ಡ ಮುಖಭಂಗ ಮಾಡಿದೆ. ರಾಜ್ಯದ ತೆರಿಗೆ ಹಣದಿಂದ ಖರ್ಚು ಮಾಡಿ ಜಾತಿ ಗಣತಿ ಮಾಡಿಸಿದ್ದರು. ಶೇ. 94ರಷ್ಟು ಸರಿ ಇದೆ. ದತ್ತಾಂಶದಲ್ಲಿ ವ್ಯತ್ಯಾಸ ಇಲ್ಲ ಅಂತ ಕ್ಯಾಬಿನೆಟ್ ನಲ್ಲಿ ಹೇಳಿದ್ದರು. ಆದರೆ, ನಿನ್ನೆ ಹೈಕಮಾಂಡ್ ಎದುರು ಬೆಕ್ಕಿನ ಮರಿಯಂತೆ ಕುಳಿತು ಎದ್ದು ಬಂದಿದ್ದಾರೆ. ಅಪಾಯ ಆದಾಗ ಜಾತಿಗಣತಿ, ಒಬಿಸಿ ಅಂದುಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.



















