ಬೆಂಗಳೂರು: ವೈಯಕ್ತಿಕ ಸಾಲ, ಗೃಹಸಾಲ ಸೇರಿ ಹಲವು ರೀತಿಯಲ್ಲಿ ಸಾಲ ಮಾಡಿದವರಿಗೆ HDFC ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. ಆಯ್ದ ಅವಧಿಯ ಸಾಲಗಳ ಮೇಲೆ ಎಂ ಸಿ ಎಲ್ ಆರ್ (MCLR – Marginal Cost of Funds Based Lending Rate) ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಹೊಸ ದರಗಳು ಮೇ 7, 2026 ರಿಂದ ಜಾರಿಗೆ ಬಂದಿವೆ.
ಎಚ್ ಡಿ ಎಫ್ ಸಿ ಹೊಸ ಬಡ್ಡಿದರದಿಂದಾಗಿ ವೈಯಕ್ತಿಕ ಸಾಲ, ವಾಹನ ಸಾಲ ಮತ್ತು ಕೆಲವು ಹಳೆಯ ಗೃಹ ಸಾಲಗಳು ಎಂ ಸಿ ಎಲ್ ಆರ್ ಗೆ ಲಿಂಕ್ ಆಗಿದ್ದರೆ, ಅವುಗಳ ಮಾಸಿಕ ಕಂತು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಬ್ಯಾಂಕುಗಳು ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿದರವನ್ನೇ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ಎಂದು ಕರೆಯಲಾಗುತ್ತದೆ.
ಹೊಸ ಬಡ್ಡಿದರದ ಪಟ್ಟಿ ಇಲ್ಲಿದೆ
ಸಾಲದ ಅವಧಿ ಹೊಸ ಬಡ್ಡಿದರ ಹಳೆಯ ಬಡ್ಡಿದರ ಬದಲಾವಣೆ
1 ತಿಂಗಳು 8.05% 8.10% 0.05% ಕಡಿತ
3 ತಿಂಗಳು 8.15% 8.20% 0.05% ಕಡಿತ
6 ತಿಂಗಳು 8.30% 8.35% 0.05% ಕಡಿತ
1 ವರ್ಷ 8.35% 8.35% ಬದಲಾವಣೆ ಇಲ್ಲ
2 ವರ್ಷ 8.45% 8.45% ಬದಲಾವಣೆ ಇಲ್ಲ
3 ವರ್ಷ 8.60% 8.55% 0.05% ಏರಿಕೆ
ಸಣ್ಣ ವ್ಯಾಪಾರಸ್ಥರು ಅಥವಾ ಅಲ್ಪಾವಧಿಗೆ ಸಾಲ ಪಡೆದವರಿಗೆ ಬಡ್ಡಿಯ ಹೊರೆ ತಗ್ಗಲಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಈಗ ವಿವಿಧ ಅವಧಿಯ ಸಾಲಗಳ ಮೇಲೆ 5 ಬೇಸಿಸ್ ಪಾಯಿಂಟ್ (0.05%) ವರೆಗೆ ಕಡಿತ ಮಾಡಿದೆ. ಇದರಿಂದ ಗ್ರಾಹಕರಿಗೆ ಅಲ್ಪ ಪ್ರಮಾಣದ ಇಎಂಐ ಹೊರೆ ತಗ್ಗಲಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ RVNL ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ನೇಮಕಾತಿ : 2.8 ಲಕ್ಷ ರೂ. ಸಂಬಳ



















