ಬೆಂಗಳೂರಿನಲ್ಲಿ ಪಟಾಕಿ ಅವಾಂತರಗಳು ಹೆಚ್ಚಾಗುತ್ತಿವೆ. ನಗರದ ಮಿಂಟೋ ಆಸ್ಪತ್ರೆಯಲ್ಲಿ ನಿನ್ನೆ ಮತ್ತೆ 8 ಹೊಸ ಪ್ರಕರಣಗಳು ದಾಖಲಾಗಿವೆ.
ದಾಖಲಾದ 8 ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿವೆ. ಉಳಿದ ಮೂವರಿಗೆ ಸಾಮಾನ್ಯ ಮಟ್ಟದ ಗಾಯಗಳಾಗಿವೆ. ಪಟಾಕಿ ಅವಘಡದಿಂದ ಈವರೆಗೆ ಒಟ್ಟು 52 ಮಂದಿ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ದಾರಿಯಲ್ಲಿ ಹೋಗುತ್ತಿರುವವರು ಮತ್ತು ಪಟಾಕಿ ಸಿಡಿಸುವುದನ್ನು ನೋಡುತ್ತಿರುವವರೇ ಈ ಅವಘಡಗಳಿಗೆ ಹೆಚ್ಚು ಬಾಧಿತರಾಗಿದ್ದಾರೆ. ಗಾಯಗೊಂಡವರಲ್ಲಿ ಮಕ್ಕಳ ಕಣ್ಣಿಗೆ ಹೆಚ್ಚಿನ ಹಾನಿಯಾಗಿದ್ದು, ವಯಸ್ಸಾದವರೂ ಸಹ ಇದ್ದಾರೆ.
















