ದೆಹಲಿ: ಸೋನಿಯಾ ಗಾಂಧಿ ಅವರ ಆತ್ಮಕಥನ ಪುಸ್ತಕ ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಭಾರತವೇ ನನ್ನ ದೇಶ ಮತ್ತು ಭಾರತವೇ ನನ್ನ ಮನೆ ಎಂದು ಅವರು ಹೇಳಿದ್ದಾರೆ. ಸುಳ್ಳುಗಳಿಗೆ ತೆರೆ ಎಳೆಯಲು ಆತ್ಮಚರಿತ್ರೆ ಬರೆದಿರುವುದಾಗಿ ಸೋನಿಯಾ ತಿಳಿಸಿದ್ದಾರೆ.
ಇನ್ನು ನನ್ನ ತಾಯಿ 4 ಬಾರಿ ಕ್ಯಾನ್ಸರ್ ಗೆದ್ದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ತಾಯಿಯಲ್ಲಿ ನಾನು ಎಂದಿಗೂ ಭಯವನ್ನು ಕಂಡಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ. ನನ್ನ ತಾಯಿ ಯಾವುದಕ್ಕೂ ಹೆದರಿಲ್ಲ ಮತ್ತು ಹಿಂದೆ ಸರಿದಿಲ್ಲ ಎಂದಿದ್ದಾರೆ. ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಸೀನರಾಗಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಏಕೈಕ ನಾಯಕ ಕೂಡ ಗಮನ ಸೆಳೆದರು.



















