ನಮ್ಮ ಮೆಟ್ರೋ ಪಿಂಕ್ ಲೈನ್ನ ಮೂರು ನಿಲ್ದಾಣಗಳ ಹೆಸರುಗಳನ್ನು ಬದಲಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ಹಲವು ದಿನಗಳಿಂದ ಈ ನಿಲ್ದಾಣಗಳ ಹೆಸರು ಬದಲಾಯಿಸುವಂತೆ ಬೇಡಿಕೆಯಿತ್ತು. ಅದರಂತೆ, ಐಐಎಂಬಿ ಮೆಟ್ರೋ ನಿಲ್ದಾಣದ ಹೆಸರನ್ನು ಬಿಳೇಕಹಳ್ಳಿ ಎಂದು ಬದಲಾಯಿಸಲಾಗಿದೆ.
ಜೆಪಿ ನಗರ 4ನೇ ಹಂತದ ನಿಲ್ದಾಣವನ್ನು ಎನ್ಎಸ್ ಪಾಳ್ಯ ಎಂದು ಮರುನಾಮಕರಣ ಮಾಡಲಾಗಿದೆ.
ಅಲ್ಲದೆ, ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರನ್ನು ಎಸ್ಜಿ (SG) ಪಾಳ್ಯ ಅಂದರೆ ಸದ್ದುಗುಂಟೆ ಪಾಳ್ಯ ಎಂದು ಬದಲಿಸಲಾಗಿದೆ. ಹೆಸರು ಬದಲಾವಣೆ ಕುರಿತು ಕೇಂದ್ರ ವಸತಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.



















