ಬೆಂಗಳೂರು : ಮದುವೆ, ಅನಾರೋಗ್ಯ, ಹೊಸ ಮನೆ ಖರೀದಿಸಿ ಸೇರಿ ಹಲವು ವಿಶೇಷ ಸಂದರ್ಭಗಳಲ್ಲಿ ಪಿಎಫ್ ಖಾತೆಯಲ್ಲಿರುವ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಅದರಲ್ಲೂ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವ ನಿಯಮಗಳನ್ನು ಈಗ ತುಂಬ ಸರಳಗೊಳಿಸಲಾಗಿದೆ. ಆನ್ ಲೈನ್ ಮೂಲಕ ಕೇವಲ 2-3 ದಿನಗಳಲ್ಲಿಯೇ ಈಗ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಬಹುದಾಗಿದೆ. ಆದರೆ, ಇಪಿಎಫ್ಒ ಪೋರ್ಟಲ್ ನಲ್ಲಿ ಪ್ರೊಫೈಲ್ ಫೋಟೋ ಅಪ್ ಲೋಡ್ ಮಾಡದಿದ್ದರೂ ಈಗ ಕ್ಲೇಮ್ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾದರೆ, ಇಪಿಎಫ್ಒ ವೆಬ್ ಸೈಟ್ ನಲ್ಲಿ ಪ್ರೊಫೈಲ್ ಫೋಟೋವನ್ನು ಹೇಗೆ ಅಪ್ ಲೋಡ್ ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್.
ಇಪಿಎಫ್ಒ ಪೋರ್ಟಲ್‌ಗೆ ಲಾಗಿನ್ ಆಗಿ: ಇಪಿಎಫ್ಒ ಯುನಿಫೈಡ್ ಮೆಂಬರ್ ಪೋರ್ಟಲ್ (Unified Member Portal) ವೆಬ್ ಸೈಟ್ https://unifiedportal-mem.epfindia.gov.in/ಗೆ ಭೇಟಿ ನೀಡಿ. ನಿಮ್ಮ UAN (ಯುನಿವರ್ಸಲ್ ಅಕೌಂಟ್ ನಂಬರ್), ಪಾಸ್ ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ.
ಪ್ರೊಫೈಲ್ ವಿಭಾಗಕ್ಕೆ ಹೋಗಿ: ಲಾಗಿನ್ ಆದ ನಂತರ, ಮೇಲಿನ ಮೆನುವಿನಲ್ಲಿರುವ ‘View’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಬಳಿಕ ‘Profile’ ಆಯ್ಕೆಯನ್ನು ಆರಿಸಿ.
ಫೋಟೋ ಬದಲಾಯಿಸಿ: ನಿಮ್ಮ ಪ್ರೊಫೈಲ್ ಪೇಜ್ ತೆರೆದಾಗ, ಎಡಭಾಗದಲ್ಲಿ ನಿಮ್ಮ ಫೋಟೋ ಕಾಣಿಸುವ ಜಾಗದಲ್ಲಿ ‘Change Photo’ ಎಂಬ ಆಯ್ಕೆ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಫೋಟೋ ಅಪ್ ಲೋಡ್ ಮಾಡಿ: ‘Browse’ ಬಟನ್ ಕ್ಲಿಕ್ ಮಾಡಿ, ನೀವು ಅಪ್ ಲೋಡ್ ಮಾಡಬೇಕಾದ ಡಿಜಿಟಲ್ ಫೋಟೋವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ‘Preview’ ಮೇಲೆ ಕ್ಲಿಕ್ ಮಾಡಿ ಫೋಟೋ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಬಳಿಕ ‘Upload Photographs’ ಕ್ಲಿಕ್ ಮಾಡಿ.
ದೃಢೀಕರಿಸಿ: ಕೊನೆಯದಾಗಿ ‘OK’ ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಇದನ್ನೂ ಓದಿ : ಕೇಂದ್ರ ಸರ್ಕಾರದ RITES ಸಂಸ್ಥೆಯಲ್ಲಿ ನೇಮಕಾತಿ : ತಿಂಗಳಿಗೆ 1.4 ಲಕ್ಷ ರೂ. ಸ್ಯಾಲರಿ!



















