ಉಡುಪಿ : ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಾಗೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಚಿಣ್ಣರ ಕಲರವ-2026” ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ರಾಘವೇಂದ್ರ ನಾಗೂರು ಅವರ ನಿರ್ದೇಶನದಲ್ಲಿ ಮೇ 23ರಂದು ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯ ಈಶ್ವರ ದೇವಾಡಿಗ ಅವರು ಕಾರ್ಯಕ್ರಮ ಉದ್ಘಾಟಿಸಿ ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಬೆಳೆಯಲು ಇಂತಹ ಶಿಬಿರಗಳು ಪ್ರೇರಣೆಯಾಗಿದ್ದು, ಸಂಸ್ಕೃತಿ ಮತ್ತು ಕಲೆಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕನ್ನಡ ಕವನ ಕಟ್ಟುವಿಕೆ, ಪೇಪರ್ ಕ್ರಾಫ್ಟ್, ಮಾರ್ಬಲ್ ಆರ್ಟ್, ಮುಖವಾಡ ತಯಾರಿಕೆ, ಹಾಡು-ಪಾಡು, ಗಾಳಿಪಟ ತಯಾರಿಕೆ, ಬಣ್ಣದ ಜೊತೆ ಆಟ, ಸೂಪರ್ ಮಿನಿಟ್ ಸೇರಿದಂತೆ ಹಲವು ಮನರಂಜನಾ ಹಾಗೂ ಸೃಜನಾತ್ಮಕ ಚಟುವಟಿಕೆಗಳು ನಡೆದವು.
ಕಾರ್ಯಕ್ರಮದ ಸಂಯೋಜಕರಾದ ರಾಘವೇಂದ್ರ ಅವರು ಮಾತನಾಡಿ, “ಚಿಣ್ಣರ ಕಲರವ-2026” ಯಶಸ್ವಿಯಾಗಿ ನೆರವೇರಲು ಅನೇಕರು ನೀಡಿದ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರತ್ನಾಕರ್ ಉಡುಪ, ಸಂಧ್ಯಾ ಉಡುಪ, ಫಾರುಕ್ ಸಾಹೇಬ್, ಎಮ್ ಹೆಚ್ ಉಬೈದುಲ್ಲಾ, ಯೋಗೀಶ್ ದೇವಾಡಿಗ, ಗಣೇಶ್ ದೇವಾಡಿಗ, ರಾಘವೇಂದ್ರ ಖಾರ್ವಿ, ಬಾಲಕೃಷ್ಣ ಪ್ರಭು, ಮಂಜುನಾಥ್ ಕಾರಂತ್, ಡಾ. ಪ್ರವೀಣ ಶೆಟ್ಟಿ, ಜಗದೀಶ್ ಕೆ, ನಾಗರತ್ನ, ವಂದನಾ, ವಿದ್ಯಾಧರ ದೇವಾಡಿಗ, ಜಿಶಾನ್, ನತರ್ ಸುರೇಶ್, ಅಚ್ಚುತ್ ಬಿಲ್ಲವ, ದಿನಕರ, ಭಾಸ್ಕರ ದೇವಾಡಿಗ, ನಿತ್ಯಾನಂದ ದೇವಾಡಿಗ, ಗಣೇಶ್ ಹೇರಾಂಜಲು, ಕೃಷ್ಣ ಕೊಡೇರಿ, ಅನ್ನಪೂರ್ಣ ಸೇರಿದಂತೆ ನೂರಾರು ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಮಹಾಬಲ ಕೆ, ಶೇಖರ್ ದೇವಾಡಿಗ, ದಿನೇಶ್ ವಿ ಹಾಗೂ ರಾಜೇಂದ್ರ ಹಳ್ಳಿಹೊಳೆ ಭಾಗವಹಿಸಿದ್ದರು. ರಾಘವೇಂದ್ರ ನಾಗೂರು ಸ್ವಾಗತಿಸಿದರು, ದಿನೇಶ್ ವಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಂತೋಷ ಮೊಗವೀರ ವಂದಿಸಿದರು.
ಇದನ್ನೂ ಓದಿ : ‘ಇಂಡಿಯಾ’ ಮೈತ್ರಿಕೂಟದ ಮರುಜೀವಕ್ಕೆ ಮಮತಾ ಬ್ಯಾನರ್ಜಿ ಕಸರತ್ತು!



















