ನವದೆಹಲಿ: ಒಂದು ಕಾಲದಲ್ಲಿ ಬಡ ಜೀವನ ನಡೆಸುತ್ತಿದ್ದವರು ಬಳಿಕ ಅದೃಷ್ಟರೆಂಬಂತೆ ಶ್ರೀಮಂತರಾದ ಅನೇಕ ಸಂಗತಿಗಳನ್ನು ಕಾಣಬಹುದು. ಅಂತವರಲ್ಲಿ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಕೂಡ ಒಬ್ಬರಾಗಿದ್ದಾರೆ. ಇದೀಗ ಅವರಿಗೆ ಜೀವ ಬೆದರಿಕೆ ಬಂದಿದೆ.
ಒಂದು ಕಾಲದಲ್ಲಿ ಹಣ್ಣು ತರಕಾರಿ ಮಾರುತ್ತಿದ್ದ ವ್ಯಕ್ತಿ ಈಗ ಕೋಟ್ಯಾಂತರ ಮೌಲ್ಯದ ಚಿನ್ನದ ಅಂಗಡಿಯ ಮಾಲೀಕರಾಗಿದ್ದಾರೆ. ನಿತ್ಯವು ಬೆಲೆ ಬಾಳುವ ಆಭರಣಗಳನ್ನು ತೊಡುವ ಇವರು ಚಿತ್ತೋರ್‌ಗಢದ ಗೋಲ್ಡ್ ಮ್ಯಾನ್ ಎಂದೆ ಖ್ಯಾತಿ ಪಡೆದಿದ್ದಾರೆ. ಅಂತೆಯೇ ಇತ್ತೀಚೆಗಷ್ಟೇ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಅವರಿಗೆ ದರೋಡೆಕೋರ ರೋಹಿತ್ ಗೋದಾರರ ಸಹಚರರಿಂದ ಹಣಕ್ಕೆ ಆಮಿಷವೊಡ್ಡಿ ಕರೆಗಳು ಬರುತ್ತಿದ್ದವು. ಹೀಗಾಗಿ ಅವರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ರಾಜಸ್ಥಾನದ ಚಿತ್ತೋರ್‌ಗಢದ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಅವರಿಗೆ ಎರಡು ದಿನಗಳ ಹಿಂದೆ ಮಿಸ್ಡ್ ಕಾಲ್ ಒಂದು ಬಂದಿತ್ತು. ಬಳಿಕ ಅದೇ ಸಂಖ್ಯೆಯಿಂದ ವಾಟ್ಸ್ ಆ್ಯಪ್ ಕರೆ ಕೂಡ ಬಂದಿದ್ದು ಅದೇ ನಂಬರ್ ನಿಂದ ಆಡಿಯೋ ರೆಕಾರ್ಡಿಂಗ್ ಒಂದು ಕಳಿಸಲಾಗಿದೆ. 5 ಕೋಟಿ ರೂ. ಬೇಡಿಕೆ ಇಟ್ಟು ಕೊಡದಿದ್ದರೆ ಸುಲಿಗೆ ಮಾಡುದಾಗಿ ಆಡಿಯೋ ರೆಕಾರ್ಡಿಂಗ್ ನಲ್ಲಿ ಇತ್ತು. ಹೀಗಾಗಿ ಖಾಟಿಕ್ ಅವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ದರೋಡೆಕೋರ ರೋಹಿತ್ ಗೋದಾರ ಜೊತೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಳ್ಳುವ ಕೆಲವೊಬ್ಬರಿಂದ ತನಗೆ ಸುಲಿಗೆ ಕರೆ ಬಂದಿದೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆಡಿಯೋ ರೆಕಾರ್ಡ್ ಮಾಡಿದ್ದ ವ್ಯಕ್ತಿ ತಾನು ಹೇಳುವುದನ್ನು ನೀವು ಪಾಲಿಸದಿದ್ದರೆ ಚಿನ್ನ ಧರಿಸುವ ಸ್ಥಿತಿಯಲ್ಲಿ ನೀನೇ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.. ಹೀಗಾಗಿ ಪೊಲೀಸರು ವಿವಿಧ ಆಯಾಮದಲ್ಲಿ ಈ ಬಗ್ಗೆ ತನಿಖೆ ನಡೆಸಿದ್ದಾರೆ.
50 ವರ್ಷ ಪ್ರಾಯದ ಕನ್ಹಯ್ಯಾಲಾಲ್ ಖಾತಿಕ್ ಅವರು ಆರಂಭದಲ್ಲಿ ಕೈಗಾಡಿಯಲ್ಲಿ ತರಕಾರಿ ಗಳನ್ನು ಮಾರುತ್ತಿದ್ದರು. ವ್ಯಾಪಾರ ಚೆನ್ನಾಗಾ್ ಅನಂತರ ಅವರ ಅದೃಷ್ಟ ಬದಲಾಗಿದೆ. ಕೆಲವೇ ವರ್ಷಗಳಲ್ಲಿ ದೊಡ್ಡ ಉದ್ಯಮಿ ಆದರು. ಅವರಿಗೆ ಚಿನ್ನದ ಆಭರಣಗಳ ಬಗ್ಗೆ ಮೋಹ ಇದ್ದ ಕಾರಣ ಆಭರಣಗಳನ್ನು ಸಂಗ್ರಹಮಾಡಿ ನಿತ್ಯ ಅವರು ಧರಿಸುತ್ತಿದ್ದರು. 15 ವರ್ಷದ ಹಿಂದೆ ಸ್ನೇಹಿತ ರೊಬ್ಬರು 10 ತೊಲ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು ಅಂದಿನಿಂದ ನಿತ್ಯವು ದೊಡ್ಡ ದೊಡ್ಡ ಆಭರಣ ತೊಟ್ಟುಕೊಂಡು ಸಾರ್ವಜನಿಕವಾಗಿ ಓಡಾಡುವುದನ್ನು ರೂಢಿಸಿಕೊಂಡರು. ಅವರು ಪ್ರಸ್ತುತ ಸುಮಾರು 3.5 ಕೆಜಿ ಚಿನ್ನವನ್ನು ಧರಿಸುತ್ತಿದ್ದು ಚಿತ್ತೋರ್‌ಗಢದಲ್ಲಿ ಅವರಿಗೆ ‘ಗೋಲ್ಡ್‌ಮ್ಯಾನ್’ ಎಂದೆ ಖ್ಯಾತಿ ಪಡೆದಿದ್ದಾರೆ.
ಇದನ್ನೂ ಓದಿ : ಅಮೆರಿಕಕ್ಕೆ ವಲಸೆ ಬರುವವರಿಗೆ ಆಘಾತ : ‘ಮೂರನೇ ಜಗತ್ತಿನ’ ರಾಷ್ಟ್ರಗಳ ವಲಸೆಗೆ ಶಾಶ್ವತ ತಡೆ ಒಡ್ಡಿದ ಟ್ರಂಪ್!



















