ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆಯಿದ್ದು, ನಾಳೆಯಿಂದಲೇ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳವಾಗಬಹುದು. ನಾಲ್ಕೂ ಸಾರಿಗೆ ನಿಗಮಗಳ ದರ ಪರಿಷ್ಕರಣೆ ಕುರಿತು ಇಂದು ಎಷ್ಟು ದರ ಹೆಚ್ಚಳವಾಗಲಿದೆ ಎಂಬುದು ಅಂತಿಮಗೊಳ್ಳಲಿದ್ದು, ಇಂದು ಬೆಳಗ್ಗೆ 11.30ಕ್ಕೆ ಸಚಿವ ಭೈರತಿ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ಸ್ಟೇಜ್ ಆಧಾರಿತವಾಗಿ ಶೇ.20 ರಿಂದ 25 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದ್ದು, ಇಂದು ಘೋಷಣೆಯಾಗಿ ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರುವ ನಿರೀಕ್ಷೆಯಿದೆ.



















