ಬೆಂಗಳೂರು: ನಗರದ ರಸ್ತೆ ಗುಂಡಿಗೆ ಮತ್ತೊಂದು ಬಲಿ, ಬೈಕ್ ಸವಾರನೊಬ್ಬ ಪೈಪ್ ಲೈನ್ ಮಾಡಲು ತೆಗೆದಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನೆಲಮಂಗಲದ ಸುಭಾಷ್ ನಗರದ ಬಜಾಜ್ ಶೋ ರೂಮ್ ಬಳಿ ನಡೆದಿದೆ.
ತಬ್ರೇಜ್ (32) ಮೃತ ಸವಾರ, ನೀರಿಗಾಗಿ ಪೈಪ್ ಲೈನ್ ಮಾಡಲು ತೆಗೆದ ಗುಂಡಿನ್ನು ಸರಿಯಾಗಿ ಮುಚ್ಚಿರಲಿಲ್ಲ. ಈ ವೇಳೆ ಸವಾರ ಬೈಕ್‌ನಲ್ಲಿ ತೆರಳುವಾಗ ಗುಂಡಿಗೆ ಬಿದ್ದ ಹಿನ್ನಲೆ ಸಡನ್ ಬ್ರೇಕ್ ಹಾಕಿದ ಪರಿಣಾಮ ರಸ್ತೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡು ಜೀವನ್ಮರಣದ ಜೊತೆಗೆ ಹೋರಾಟ ಮಾಡುತ್ತಿದ್ದ ತಬ್ರೇಜ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಡಿ. 17 ರಂದು ಈ ಘಟನೆ ನಡೆದಿದ್ದು, ನೀರಿಗಾಗಿ ಪೈಪ್ ಲೈನ್ ಮಾಡಲು ತೆಗೆದ ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚದ ಪರಿಣಾಮ ಈ ದುರಂತ ನಡೆದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹೃದಯಘಾತಕ್ಕೆ ಉಸಿರು ನಿಲ್ಲಿಸಿದ ಹಿರಿಯ ಪತ್ರಕರ್ತ ‘ದೊಡ್ಡಬೊಮ್ಮಯ್ಯ



















