ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಆರೋಗ್ಯ-ಆಹಾರ

Radiation Oncology : ತಲೆ, ಕುತ್ತಿಗೆ ಕ್ಯಾನ್ಸರ್‌ ಆರೈಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ರೇಡಿಯೇಷನ್ಆಂಕೊಲಜಿ

May 25, 2025
Radiation Oncology
Share on WhatsappShare on FacebookShare on Twitter

ಡಾ. ಶಾಂತಲಿಂಗ ನಿಗುಡಗಿ, ಸೀನಿಯರ್ ಕನ್ಸಲ್ಟಂಟ್ ರೇಡಿಯೇಶನ್/ಕ್ಲಿನಿಕಲ್ ಆಂಕೊಲಾಜಿಸ್ಟ್, ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, ಕಲಬುರಗಿ

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ರೋಗನಿರ್ಣಯವಾದಾಗ ಸಾಮಾನ್ಯವಾಗಿ ಮೊದಲ ಪ್ರತಿಕ್ರಿಯೆ ಎಂದರೆ, ‘ಅದನ್ನು ತೆಗೆದು ಬಿಡಿ’. ಆದರೆ, ಆಂಕೊಲಾಜಿಯ ಕ್ಷೇತ್ರದಲ್ಲಿ ಕೆಲವು ಕ್ರಾಂತಿಕಾರಕ ಬೆಳವಣಿಗೆಗಳಾಗಿದ್ದು, ರೇಡಿಯೇಶನ್ ಚಿಕಿತ್ಸೆಯು ಒಂದು ಶಕ್ತಿಶಾಲಿ ಸಾಧನವಾಗಿ ಹೊರಹೊಮ್ಮಿದೆ. ಕೇವಲ ಶಸ್ತ್ರಚಿಕಿತ್ಸೆಗೆ ಪೂರಕವಾಗಿರದೆ, (radiation oncology) ಕೆಲವೊಮ್ಮೆ ಶಸ್ತ್ರಚಿಕಿತ್ಸೆಗೆ ಸಮಾನಾಂತರವಾದ ಚಿಕಿತ್ಸಾ ಪದ್ಧತಿಯಾಗಿಯೂ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆಯ ಆಯ್ಕೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಈ ಸಂದರ್ಭದಲ್ಲಿ,  ಬಹುವಿಧ ತಜ್ಞರ ತಂಡದ ಸಹಕಾರವು ಮಹತ್ವವಾಗುತ್ತದೆ. ಶಸ್ತ್ರಚಿಕಿತ್ಸಕರು, ವೈದ್ಯಕೀಯ ಆಂಕೊಲಾಜಿಸ್ಟ್‌ಗಳು ಮತ್ತು ರೇಡಿಯೇಶನ್ ಆಂಕೊಲಾಜಿಸ್ಟ್‌ಗಳು ಆರಂಭದಿಂದಲೇ ಒಟ್ಟಿಗೆ ಕೆಲಸ ಮಾಡಿ ಪ್ರತಿಯೊಬ್ಬ ರೋಗಿಗೂ ಸೂಕ್ತ ಚಿಕಿತ್ಸಾ ಯೋಜನೆ ರೂಪಿಸುತ್ತಾರೆ. ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳಿಗೆ ಈ ಸಹಕಾರವು ಕೇವಲ ಒಂದು ಪ್ರಯೋಜನವಾಗಿರದೇ ಅತ್ಯಗತ್ಯ

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳ ವಿಶೇಷತೆ

ಬಾಯಿ, ಗಂಟಲು, ಧ್ವನಿಪೆಟ್ಟಿಗೆ, ಮತ್ತು ಸಂಬಂಧಿತ ಪ್ರದೇಶಗಳ ಕ್ಯಾನ್ಸರ್‌ಗಳು ವಿಶೇಷವಾಗಿ ಸವಾಲಿನ ಸ್ವರೂಪ ಹೊಂದಿವೆ. ಈ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಕೇವಲ ಗೆಡ್ಡೆಯನ್ನು ತೆಗೆದುಹಾಕುವುದಷ್ಟೇ ಪ್ರಮುಖವಲ್ಲ. ಮಾತನಾಡುವಿಕೆ, ಆಹಾರ ಮತ್ತು ನೀರು ನುಂಗುವಿಕೆ, ಮತ್ತು ಉಸಿರಾಟದಂತಹ ಪ್ರಮುಖ ಕಾರ್ಯಗಳನ್ನು ಸಂರಕ್ಷಿಸುವುದೂ ಮಹತ್ವದ್ದಾಗಿದೆ.

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳು ನಮ್ಮ ಗುರುತನ್ನು ವ್ಯಾಖ್ಯಾನಿಸುವ ಮತ್ತು ಜೀವನದ ಗುಣಮಟ್ಟವನ್ನು ನಿರ್ಧರಿಸುವ ಪ್ರದೇಶಗಳನ್ನು ಪರಿಣಾಮ ಬೀರುತ್ತವೆ. ಆದ್ದರಿಂದ, ಒಂದೇ ರೀತಿಯ ಚಿಕಿತ್ಸಾ ವಿಧಾನವು ಇಲ್ಲಿ ಕಾರ್ಯಸಾಧ್ಯವಲ್ಲ. ಚಿಕಿತ್ಸೆಯನ್ನು ಯೋಜಿಸುವ ವೈದ್ಯಕೀಯ ತಂಡವು ನಿಖರತೆ, ಸಹಾನುಭೂತಿ, ಮತ್ತು ಕಾಳಜಿಯ ಸಂಯೋಜನೆ ಅಳವಡಿಸಿಕೊಳ್ಳಬೇಕು.

ರೇಡಿಯೇಶನ್ ಆಂಕೊಲಾಜಿಸ್ಟ್‌ನ ಪಾತ್ರ

ರೇಡಿಯೇಶನ್ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು ಉನ್ನತ-ಶಕ್ತಿಯ ಕಿರಣಗಳನ್ನು ಬಳಸಲಾಗುತ್ತದೆ.  ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ ಸಂದರ್ಭದಲ್ಲಿ, ರೇಡಿಯೇಶನ್ ಚಿಕಿತ್ಸೆಯನ್ನು ಈ ಕೆಳಗಿನ ರೀತಿಯಲ್ಲಿ ಬಳಸಲಾಗುತ್ತದೆ:

ಪ್ರಾಥಮಿಕ ಚಿಕಿತ್ಸೆಯಾಗಿ: ವಿಶೇಷವಾಗಿ ಗಂಟಲು ಅಥವಾ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗಳಿಗೆ.

ಶಸ್ತ್ರಚಿಕಿತ್ಸೆಯ ನಂತರ: ಉಳಿದಿರುವ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು.

ಶಸ್ತ್ರಚಿಕಿತ್ಸೆಗೆ ಮೊದಲು: ಕೆಲವು ಸಂದರ್ಭಗಳಲ್ಲಿ ಗೆಡ್ಡೆಯ ಗಾತ್ರವನ್ನು ಕಡಿಮೆ ಮಾಡಲು.

ಕೀಮೋಥೆರಪಿಯೊಂದಿಗೆ: ಪರಿಣಾಮಕಾರಿತ್ವವನ್ನು ಹೆಚ್ಚಿಸಲು (ಇದನ್ನು ಕೆಮೊರೇಡಿಯೇಶನ್ ಎಂದು ಕರೆಯಲಾಗುತ್ತದೆ).

ನಿಖರ ಚಿಕಿತ್ಸೆಗಾಗಿ ಆಧುನಿಕ ತಂತ್ರಜ್ಞಾನ

ರೇಡಿಯೇಶನ್ ಆಂಕೊಲಾಜಿಯು ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಬೆಳವಣಿಗೆ ಕಂಡಿದೆ. ಇಂಟೆನ್ಸಿಟಿ-ಮಾಡ್ಯುಲೇಟೆಡ್ ರೇಡಿಯೇಶನ್ ಥೆರಪಿ (IMRT) ಮತ್ತು  ಇಮೇಜ್-ಗೈಡೆಡ್ ರೇಡಿಯೇಶನ್ ಥೆರಪಿ (IGRT) ರೀತಿಯ ತಂತ್ರಜ್ಞಾನಗಳು ಗೆಡ್ಡೆಯ ನಿಖರ ಆಕಾರ ಮತ್ತು ಆಳಕ್ಕೆ ರೇಡಿಯೇಶನ್ ಕಿರಣಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಕೊಡುತ್ತದೆ.  ಇದರಿಂದ ಕಣ್ಣುಗಳು, ಮೆದುಳು, ಅಥವಾ ಲಾಲಾರಸ ಗ್ರಂಥಿಗಳಂತಹ ಸುತ್ತಮುತ್ತಲಿನ ಅಂಗಾಂಶಗಳಿಗೆ ಹಾನಿಯಾಗದಂತೆ ರಕ್ಷಿಸಲಾಗುತ್ತದೆ.

ಹಿಂದಿನ ದಿನಗಳಲ್ಲಿ, ಚಿಕಿತ್ಸೆಯ ನಂತರ ರೋಗಿಗಳು ಮಾತನಾಡುವ ಅಥವಾ ಆರಾಮವಾಗಿ ಆಹಾರ ಸೇವಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದರು. ಆದರೆ, ಇಂದಿನ ಆಧುನಿಕ ತಂತ್ರಜ್ಞಾನಗಳಿಂದಾಗಿ, ಅನೇಕ ರೋಗಿಗಳು ತಮ್ಮ ಈ ಕಾರ್ಯಗಳನ್ನು ಮತ್ತು ಆತ್ಮವಿಶ್ವಾಸ ಉಳಿಸಿಕೊಳ್ಳುತ್ತಿದ್ದಾರೆ.

ಬಹುವಿಧ ತಂಡದ ಸಹಕಾರ

ಪ್ರಮುಖ ಕ್ಯಾನ್ಸರ್ ಕೇಂದ್ರಗಳಲ್ಲಿ.  ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣವನ್ನು ಟ್ಯೂಮರ್ ಬೋರ್ಡ್‌ಗಳಲ್ಲಿ ಚರ್ಚಿಸಲಾಗುತ್ತದೆ. ಈ ಬೋರ್ಡ್‌ಗಳಲ್ಲಿ ಶಸ್ತ್ರಚಿಕಿತ್ಸಕರು. ವೈದ್ಯಕೀಯ ಆಂಕೊಲಾಜಿಸ್ಟ್‌ಗಳು, ರೇಡಿಯೇಶನ್ ಆಂಕೊಲಾಜಿಸ್ಟ್‌ಗಳು ಮತ್ತು ಇತರ ತಜ್ಞರು ರೋಗಿಯ ಸ್ಕ್ಯಾನ್‌ಗಳು, ಬಯಾಪ್ಸಿ ಫಲಿತಾಂಶಗಳು, ವೈದ್ಯಕೀಯ ಇತಿಹಾಸ ಮತ್ತು ಜೀವನಶೈಲಿಯನ್ನು ಪರಿಶೀಲಿಸಿ ಅತ್ಯಂತ ಪರಿಣಾಮಕಾರಿ ಮತ್ತು ಕಡಿಮೆ ಹಾನಿಕಾರಕ ಚಿಕಿತ್ಸಾ ಮಾರ್ಗವನ್ನು ಶಿಫಾರಸು ಮಾಡುತ್ತಾರೆ.

ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಮತ್ತು ರೇಡಿಯೇಶನ್‌ನ ಸಂಯೋಜನೆಯನ್ನು ಆಯ್ಕೆ ಮಾಡಲಾಗುತ್ತದೆ ಅಥವಾ ರೇಡಿಯೇಶನ್ ಮತ್ತು ಕೀಮೋಥೆರಪಿಯ ಮೂಲಕ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ತಪ್ಪಿಸಲಾಗುತ್ತದೆ. ಉದಾಹರಣೆಗೆ, ಧ್ವನಿಪೆಟ್ಟಿಗೆಯ ಸಣ್ಣ ಗೆಡ್ಡೆಯನ್ನು ಕೇವಲ ರೇಡಿಯೇಶನ್‌ನಿಂದ ಯಶಸ್ವಿಯಾಗಿ ಚಿಕಿತ್ಸೆ ಮಾಡಬಹುದು, ಇದರಿಂದ ರೋಗಿಯು ಶಸ್ತ್ರಚಿಕಿತ್ಸೆಯ ಅಪಾಯಗಳಿಂದ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಪಾರಾಗುತ್ತಾನೆ.

ನಿರ್ವಹಿಸಬಹುದಾದ ಅಡ್ಡ ಪರಿಣಾಮಗಳು

ಯಾವುದೇ ಕ್ಯಾನ್ಸರ್ ಚಿಕಿತ್ಸೆಯು ದುಷ್ಪರಿಣಾಮಗಳಿಂದ ಮುಕ್ತವಾಗಿರುವುದಿಲ್ಲ. ತಲೆ ಮತ್ತು ಕುತ್ತಿಗೆಗೆ ರೇಡಿಯೇಶನ್ ಚಿಕಿತ್ಸೆಯಿಂದ ಬಾಯಿಯ ಗಾಯಗಳು, ಬಾಯಿ ಒಣಗುವಿಕೆ, ಚರ್ಮದ ಕಿರಿಕಿರಿ, ಮತ್ತು ನೀರು ನುಂಗುವ ತೊಂದರೆಗಳಂತಹ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದರೆ, ಈ ದುಷ್ಪರಿಣಾಮಗಳು ತಾತ್ಕಾಲಿಕವಾಗಿರಬಹುದು ಮತ್ತು ಮಾತು ಚಿಕಿತ್ಸಕರು. ಪೌಷ್ಟಿಕ ತಜ್ಞರು ಮತ್ತು ನೋವು ನಿರ್ವಹಣಾ ತಂಡಗಳಿಂದ ಚಿಕಿತ್ಸೆ ಪಡೆಯಬಹುದು.

ಮಾನವೀಯ ಆಯಾಮ

ಕ್ಯಾನ್ಸರ್ ಕೇವಲ ದೇಹವನ್ನು ಮಾತ್ರವಲ್ಲ, ಆತ್ಮವಿಶ್ವಾಸ, ಸಂಬಂಧಗಳು, ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ವಿಶೇಷವಾಗಿ ಮುಖ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳಿಗೆ ಅನ್ವಯ. ಈ ಸಂದರ್ಭದಲ್ಲಿ, ರೂಪವಿಕಾರಗೊಳಿಸುವ ಶಸ್ತ್ರಚಿಕಿತ್ಸೆಗಳನ್ನು ತಪ್ಪಿಸುವುದು ಅನಿವಾರ್ಯ.  ಅದಕ್ಕೆ ರೇಡಿಯೇಶನ್ ಆಂಕೊಲಾಜಿಯು, ಸಮನ್ವದ ಆರೈಕೆ ತಂತ್ರದ ಭಾಗವಾಗಿದೆ.

ವಿಳಂಬ ಮಾಡಬೇಡಿ, ಆರಂಭದಲ್ಲೇ ಚರ್ಚಿಸಿ

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಮತ್ತು ತಜ್ಞರಿಂದ ಸೂಕ್ತವಾಗಿ ಚಿಕಿತ್ಸೆ ನೀಡಿದರೆ ಯಶಸ್ವಿಯಾಗಿ ಗುಣಪಡಿಸಬಹುದು. ಆದ್ದರಿಂದ, ಬಹುವಿಧ ತಜ್ಞರ ತಂಡದೊಂದಿಗೆ ಆರಂಭಿಕ ಸಮಾಲೋಚನೆಯು ಅತ್ಯಗತ್ಯ.

ನೀವು ಅಥವಾ ನಿಮ್ಮ ಪ್ರೀತಿಪಾತ್ರರು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಎದುರಿಸುತ್ತಿದ್ದರೆ, ರೇಡಿಯೇಶನ್ ಚಿಕಿತ್ಸೆ ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ. ಇಂದು ತೆಗೆದುಕೊಳ್ಳುವ ವಾಸ್ತವದ ನಿರ್ಣಯವು ನಿಮ್ಮ ಧ್ವನಿಯನ್ನು, ನಿಮ್ಮ ನಗುವನ್ನು ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು.

Tags: CancerhealthKannada
SendShareTweet
Previous Post

Indian Econonmy : ಜಪಾನ್ ಹಿಂದಿಕ್ಕಿ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದ ಭಾರತ: ನೀತಿ ಆಯೋಗ ಸಿಇಒ ಘೋಷಣೆ

Next Post

Cargo Ship : ಕೊಚ್ಚಿಯ ಸಮುದ್ರದಲ್ಲಿ ಮುಳುಗಿದ ಅಪಾಯಕಾರಿ ಸರಕು ಹೊಂದಿದ್ದ ಹಡಗು: ಕೇರಳದಲ್ಲಿ ಹೈಅಲರ್ಟ್

Related Posts

ಸೌಂದರ್ಯಕ್ಕಾಗಿ ಶವದ ಕೊಬ್ಬಿನ ಮೊರೆ ಹೋದ ಮಹಿಳೆಯರು | ಹೊಸ ವಿವಾದಕ್ಕೆ ನಾಂದಿ ಹಾಡಿದ ‘ಅಲೊಕ್ಲೇ’ ವಿಧಾನ!
ಆರೋಗ್ಯ-ಆಹಾರ

ಸೌಂದರ್ಯಕ್ಕಾಗಿ ಶವದ ಕೊಬ್ಬಿನ ಮೊರೆ ಹೋದ ಮಹಿಳೆಯರು | ಹೊಸ ವಿವಾದಕ್ಕೆ ನಾಂದಿ ಹಾಡಿದ ‘ಅಲೊಕ್ಲೇ’ ವಿಧಾನ!

ಚಿಕ್ಕ ವಯಸ್ಸಿನಲ್ಲೇ ತಲೆಕೂದಲು ಬಿಳಿಯಾಯಿತೇ? ಚಿಂತೆ ಬಿಟ್ಟು ಈ ಆಹಾರ ಟ್ರೈ ಮಾಡಿ!
ಆರೋಗ್ಯ-ಆಹಾರ

ಚಿಕ್ಕ ವಯಸ್ಸಿನಲ್ಲೇ ತಲೆಕೂದಲು ಬಿಳಿಯಾಯಿತೇ? ಚಿಂತೆ ಬಿಟ್ಟು ಈ ಆಹಾರ ಟ್ರೈ ಮಾಡಿ!

ಜಿಬಿಎ ವ್ಯಾಪ್ತಿಯಲ್ಲಿ ದಡಾರ-ರುಬೆಲ್ಲಾ ಲಸಿಕೆ ಅಭಿಯಾನ ಆರಂಭ!   
ಆರೋಗ್ಯ-ಆಹಾರ

ಜಿಬಿಎ ವ್ಯಾಪ್ತಿಯಲ್ಲಿ ದಡಾರ-ರುಬೆಲ್ಲಾ ಲಸಿಕೆ ಅಭಿಯಾನ ಆರಂಭ!  

ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬುವಿಕೆ ಸಮಸ್ಯೆಯೇ? ಇಲ್ಲಿದೆ ಮನೆಮದ್ದು
ಆರೋಗ್ಯ-ಆಹಾರ

ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬುವಿಕೆ ಸಮಸ್ಯೆಯೇ? ಇಲ್ಲಿದೆ ಮನೆಮದ್ದು

ಬೆಂಗಳೂರಿಗರೇ ಕಣ್ಣಿನ ಮೇಲೆ ಇರಲಿ ಕಾಳಜಿ | ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ‘ಪಿಂಕ್ ಐ’ ಪ್ರಕರಣಗಳು
ಬೆಂಗಳೂರು

ಬೆಂಗಳೂರಿಗರೇ ಕಣ್ಣಿನ ಮೇಲೆ ಇರಲಿ ಕಾಳಜಿ | ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ‘ಪಿಂಕ್ ಐ’ ಪ್ರಕರಣಗಳು

ಪಿಸಿಓಡಿ-ಪಿಸಿಓಎಸ್‌ ಸಮಸ್ಯೆಯೇ..? ಯಾವ ಹಣ್ಣು ತಿಂದರೇ ಒಳ್ಳೆಯದು? ಇಲ್ಲಿದೆ ಮಾಹಿತಿ
ಆರೋಗ್ಯ-ಆಹಾರ

ಪಿಸಿಓಡಿ-ಪಿಸಿಓಎಸ್‌ ಸಮಸ್ಯೆಯೇ..? ಯಾವ ಹಣ್ಣು ತಿಂದರೇ ಒಳ್ಳೆಯದು? ಇಲ್ಲಿದೆ ಮಾಹಿತಿ

Next Post
Cargo Ship

Cargo Ship : ಕೊಚ್ಚಿಯ ಸಮುದ್ರದಲ್ಲಿ ಮುಳುಗಿದ ಅಪಾಯಕಾರಿ ಸರಕು ಹೊಂದಿದ್ದ ಹಡಗು: ಕೇರಳದಲ್ಲಿ ಹೈಅಲರ್ಟ್

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ರಶ್ಮಿಕಾ ಮದುವೆ ಆಹ್ವಾನ ಬಂದಿಲ್ಲ, ಕರೆಯೋದಿಲ್ಲ ಅಂತನೂ ಗೊತ್ತಿದೆ | ಪ್ರಮೋದ್ ಶೆಟ್ಟಿ

ರಶ್ಮಿಕಾ ಮದುವೆ ಆಹ್ವಾನ ಬಂದಿಲ್ಲ, ಕರೆಯೋದಿಲ್ಲ ಅಂತನೂ ಗೊತ್ತಿದೆ | ಪ್ರಮೋದ್ ಶೆಟ್ಟಿ

‘ರಾಜನಿವಾಸ’ ಹೋಲಿಕೆ ನಿಜನಾ..?

‘ರಾಜನಿವಾಸ’ ಹೋಲಿಕೆ ನಿಜನಾ..?

Recent News

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ರಶ್ಮಿಕಾ ಮದುವೆ ಆಹ್ವಾನ ಬಂದಿಲ್ಲ, ಕರೆಯೋದಿಲ್ಲ ಅಂತನೂ ಗೊತ್ತಿದೆ | ಪ್ರಮೋದ್ ಶೆಟ್ಟಿ

ರಶ್ಮಿಕಾ ಮದುವೆ ಆಹ್ವಾನ ಬಂದಿಲ್ಲ, ಕರೆಯೋದಿಲ್ಲ ಅಂತನೂ ಗೊತ್ತಿದೆ | ಪ್ರಮೋದ್ ಶೆಟ್ಟಿ

‘ರಾಜನಿವಾಸ’ ಹೋಲಿಕೆ ನಿಜನಾ..?

‘ರಾಜನಿವಾಸ’ ಹೋಲಿಕೆ ನಿಜನಾ..?

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಮಂಗಳಮುಖಿ ಮೇಲಿನ ಪ್ರೀತಿ ; ಮುಂದೆ ಆಗಿದ್ದೇ ಬೇರೆ?

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್ | ಟೀಂ ಇಂಡಿಯಾ ತಲೆಕೆಡಿಸಿಕೊಳ್ಳಲ್ಲ ಎಂದ ಕೋಚ್ ಸಿತಾಂಶು ಕೋಟಕ್!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat