ಬೆಂಗಳುರು: ಇನ್ನೇನು ಚಳಿಗಾಲ ಶುರುವಾಯಿತು. ಜ್ವರ, ಶೀತ, ಕೆಮ್ಮಿನ ಸಮಸ್ಯೆ ಕಂಡುಬರುವುದು ಸಹಜ. ಅದರಲ್ಲೂ ಕೆಮ್ಮಿನ ಸಮಸ್ಯೆ ಕಾಣಿಸಿಕೊಂಡರಂತೂ ಹೆಚ್ಚಿನವರು ತಕ್ಷಣಕ್ಕೆ ಕಫ್ ಸಿರಪ್ ಕುಡಿಯುತ್ತಾರೆ. ಆದರೆ ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮು ಸಿರಪ್‌ಗಳ ಮಾರಾಟ ಮಾಡದಂತೆ ಆರೋಗ್ಯ ತಜ್ಞರು ವಿರೋದಿಸಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆಯಿಂದ ಕಾಫ್ ಸಿರಪ್ ಕುರಿತು ಕೆಲವು ವಿಶೇಷ ಸಲಹಾ ಸೂಚನೆಗಳನ್ನು ಜಾರಿಗೊಳಿಸಿದ್ದಾರೆ. 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮು ಔಷಧಗಳನ್ನು ನೀಡದಂತೆ ಆದೇಶ ಹೊರಡಿಸಿದ್ದು, ಇನ್ನು 5 ವರ್ಷದೊಳಗಿನ ಮಕ್ಕಳಿಗೆ ಕಾಫ್ ಸಿರಪ್ ನೀಡಬೇಕಾದಲ್ಲಿ ಎಚ್ಚರಿಕೆ ಕ್ರಮ ಕೈಗೊಳ್ಳಲುವಂತೆ ಸೂಚನೆ ನೀಡಿದ್ದಾರೆ.
ಶೀತ, ಕೆಮ್ಮಿದ್ದರೆ ಮೊದಲು ಹೈಡ್ರೇಷನ್, ರೆಸ್ಟ್ ಮಾಡುವುದು ಮೊದಲ ಆದ್ಯತೆ ಆಗಬೇಕಾಗಿದ್ದು, ಕಾಫ್ ಸಿರಪ್ ಬಗ್ಗೆ ಎಲ್ಲಾ ಜಿಲ್ಲಾ, ನಗರ, ತಾಲ್ಲೂಕು, ಪಾಲಿಕೆ ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದೇಶ ಹೊರಡಿಸಿದ್ದಾರೆ



















