ದರ್ಶನ್ ಹಾಗೂ ಪವಿತ್ರಾಗೌಡ ನಡುವಿನ ಆಡಿಯೋ ಸಂಭಾಷಣೆ ‘ಡಿ ಗ್ಯಾಂಗ್’ಗೆ ಹೊಸ ಟೆನ್ಶನ್ ತಂದಿದೆ. ಇಬ್ಬರ ನಡುವಿನ 2 ನಿಮಿಷದ ಸಂಭಾಷಣೆ ಪ್ರಾಸಿಕ್ಯೂಷನ್ಗೆ ಪ್ರಮುಖ ಅಸ್ತ್ರವಾಗಿದೆ.ಸೋಮವಾರ ಈ ರೆಕಾರ್ಡ್ ಕ್ಲಿಪ್ ಜಡ್ಜ್ ಮುಂದೆ ಹಾಜರಾಗಲಿದೆ. ಕೋರ್ಟ್ ವಿಸಿ ಆಫ್ ಆಗಿದೆ ಎಂದು ಭಾವಿಸಿ ದರ್ಶನ್ ಮಾತನಾಡಿದ್ದರು.
4 ತಿಂಗಳಲ್ಲಿ ಜಡ್ಜ್ ಬದಲಾಗಲಿದ್ದಾರೆ, ಆಮೇಲೆ ಬೇಲ್ ಪಡೆಯೋಣ ಎಂದು ದರ್ಶನ್ ಪಿಸುಗುಟ್ಟಿದ್ದಾರೆ. ಈ ವೈಯಕ್ತಿಕ ಮಾತುಗಳು ಈಗ ‘ದಾಸ’ನಿಗೆ ಸಂಕಷ್ಟ ತಂದೊಡ್ಡಿವೆ.



















