ಬೆಂಗಳೂರು: ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಆರ್ಮಿ ಕ್ಯಾಂಟೀನ್ ಗಳಲ್ಲಿ ಖಾಲಿ ಇರುವ 52 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿರುವ ಗೋಲ್ಡನ್ ಪಾಮ್ ಸ್ಟೇಷನ್ ಕ್ಯಾಂಟೀನ್ (ಜಿಪಿಎಸ್ ಸಿ) ಸಂಸ್ಥೆಯು ನೇಮಕಾತಿಗೆ (Army Canteen Bangalore Recruitment 2026) ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಹಾಗೂ ಆಸಕ್ತಿ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಗೋಲ್ಡನ್ ಪಾಮ್ ಸ್ಟೇಷನ್ ಕ್ಯಾಂಟೀನ್
ಒಟ್ಟು ಹುದ್ದೆಗಳು: 52
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜುಲೈ 31
ಉದ್ಯೋಗ ಸ್ಥಳ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ
ಕರ್ನಾಟಕದ ಬೆಂಗಳೂರು, ಮೈಸೂರು, ಹಾಸನ ಹಾಗೂ ಕೆ.ಜಿ.ಎಫ್.ಗಳಲ್ಲಿರುವ ಆರ್ಮಿ ಕ್ಯಾಂಟೀನ್ ಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಮಾಜಿ ಸೈನಿಕರು, ಲೆಫ್ಟಿನೆಂಟ್ ಗಳು, ಕ್ಯಾಪ್ಟನ್ ಗಳು ಅರ್ಜಿ ಸಲ್ಲಿಸಬಹುದು. ಜಾಯಿಂಟ್ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್, ಸ್ಟೋರ್ ಕೀಪರ್, ಬಿಲ್ಲಿಂಗ್ ಕ್ಲರ್ಕ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 22 ಸಾವಿರ ರೂಪಾಯಿಯಿಂದ 32 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಬಯಸುವವರು ಮೊದಲಿಗೆ gpcscblr.co.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಧಿಸೂಚನೆಯನ್ನು ಓದಿಕೊಂಡು ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳrಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು Canteen Officer, Golden Palm Canteen Cell, C/o HQ K & K Sub Area, Cubbon Road, Bangalore-01 ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಹಾಗೂ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಗಳನ್ನು gpccellkksa@gmail.com. ಗೆ ಮೇಲ್ ಮಾಡಬಹುದು.



















