ಆಂಧ್ರಪ್ರದೇಶಕ್ಕೆ ಈಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಅರ್ನಬ್ ಮತ್ತು ಮುರಸು ಬಳಿಕ ಅಕ್ವಾನ್ ಚಂಡಮಾರುತದ ಆತಂಕ ಶುರುವಾಗಿದೆ. ಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ ತೀವ್ರಗೊಂಡಿದೆ. ಈ ಚಂಡಮಾರುತಕ್ಕೆ ಇರಾನ್ ದೇಶವು ಅಕ್ವಾನ್ ಎಂದು ನಾಮಕರಣ ಮಾಡಿದೆ.
ಆಂಧ್ರಪ್ರದೇಶವು ಈಗಾಗಲೇ ಎರಡು ಚಂಡಮಾರುತಗಳಿಂದ ತತ್ತರಿಸಿದೆ. ಈಗ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಂಡಿರುವ ಅಕ್ವಾನ್ ಚಂಡಮಾರುತದ ಎಫೆಕ್ಟ್ ಆಂಧ್ರಕ್ಕೆ ತಟ್ಟಲಿದೆ.



















