ಚಾಮರಾಜನಗರ : ಮಲೆ ಮಹದೇಶ್ವರ ವನ್ಯಜೀವಿಧಾಮದ ಸಫಾರಿಯಲ್ಲಿ ಪ್ರಾಣಿಗಳು ದರ್ಶನ ನೀಡುತ್ತಿದ್ದು, ಸಫಾರಿಗರು ಸಖತ್ ಖುಷ್ ಆಗಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯ ಸಫಾರಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕರಿ ಚಿರತೆ ದರ್ಶನ ಕೊಟ್ಟಿತ್ತು.
ಈ ಬೆನ್ನಲ್ಲೇ ಇದೀಗ ಅಪರೂಪದಲ್ಲಿ ಅಪರೂಪವಾದ ಬಿಳಿ ಜಿಂಕೆ ಕಾಣಿಸಿಕೊಂಡಿದ್ದು, ಸಫಾರಿಗರು ರೋಮಾಂಚಿತರಾಗಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ಜೋನ್ ವಲಯದ ವ್ಯಾಪ್ತಿಯಲ್ಲಿ ಸಫಾರಿಗೆ ತೆರಳಿದ್ದ ವೇಳೆ ಬಿಳಿ ಜಿಂಕೆ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ವನ್ಯಜೀವಿ ಸಫಾರಿಯಲ್ಲಿ ಆನೆ, ಹುಲಿ, ಕಾಡೆಮ್ಮೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಸಫಾರಿಗರು ಈಗ ಕರಿ ಚಿರತೆ, ಬಿಳಿ ಜಿಂಕೆಯಂತ ಅಪರೂಪದ ಸೈಟಿಂಗ್ಗೆ ಫಿದಾ ಆಗಿದ್ದಾರೆ.
ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಬಿಳಿ ಜಿಂಕೆಯ ಮನಮೋಹಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಅಮೆರಿಕದ ನೌಕಾ ದಿಗ್ಬಂಧನಕ್ಕೆ ಇರಾನ್ ತತ್ತರ : 45,500 ಕೋಟಿ ರೂ. ತೈಲ ಆದಾಯಕ್ಕೆ ಕತ್ತರಿ!


















