ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಎಳನೀರು ತುಂಬಿಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಏಕಾಏಕಿ ಪಲ್ಟಿಯಾಗಿ ಭಾರೀ ದುರಂತ ಸಂಭವಿಸಿದೆ.
ಅತೀಯಾದ ಲೋಡ್, ಜೊತೆಗೆ ಅತೀಯಾದ ಬಿಸಿಲಿನ ವಾತಾವರಣದಿಂದ ಪಿಕಪ್ ವಾಹನದ ಟೈಯರ್ ಸ್ಪೋಟಗೊಂಡಿದೆ. ಪರಿಣಾಮ ಪಿಕಪ್ ವಾಹನದ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಎಳನೀರು ಹೆದ್ದಾರಿಯಲ್ಲಿ ಚೆಲ್ಲಿದೆ. ಇನ್ನು ಮಾಹಿತಿಗಳ ಪ್ರಕಾರ ದುರ್ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಪಿಕಪ್ ವಾಹನ ಏಕಾಏಕಿ ಪಲ್ಟಿಯಾಗು ವೇಳೆ ಅತೀ ವೇಗವಾಗಿ ಬರುತ್ತಿದ್ದ ಇತರ ವಾಹನಗಳು ಸಹ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಈ ಘಟನೆಯ ದೃಶ್ಯ ಹಿಂಬದಿ ಕಾರಿನ ಡ್ಯಾಶ್ ಕ್ಯಾಮ್ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಇಂದು ನಟ ದರ್ಶನ್ ಪಾಲಿಗೆ ಮಹತ್ವದ ದಿನ.. ಸುಪ್ರೀಂ ಕೋರ್ಟ್‌ನಲ್ಲಿ ಭವಿಷ್ಯ ನಿರ್ಧಾರ!



















