ಒಂದಲ್ಲಾ ಎರಡಲ್ಲಾ…ಬರೋಬ್ಬರಿ 26 ಜೀವಗಳನ್ನು ಚೆಂಡಾಡಿರುವ ನರರಾಕ್ಷಸರ ಹೆಡೆಮುರಿ ಎಂದು ಪುಲ್ವಾಮಾ ದಾಳಿ ಬೆನ್ನಲ್ಲೇ ನಡೆದಿದ್ದ ಭಾರತದ ಸರ್ಜಿಕಲ್ ಸ್ಟ್ರೈಕ್ ಜಿಹಾದಿಗಳ ಎದೆಯನ್ನೇ ಬಗೆದು ಹಾಕಿತ್ತು. ಆದರೆ, ರಕ್ತ ಬೀಜಾಸುರಂತೆ ಮತ್ತೆ ಮತ್ತೆ ಹುಟ್ಟಿ ಬರುತ್ತಿರುವ ಈ ಸೈಂಧವರ ನಿರ್ನಾಮವೊಂದೇ ಈಗಿರುವ ಶಾಶ್ವತ ಪರಿಹಾರ. ಭಾರತದ ಮಗ್ಗುಲಲ್ಲೇ ಮಲಗಿರುವ ಪಾಕಿಸ್ಥಾನ ಸದಾ ವಿಷಕಾರುತ್ತಲೇ ಬಂದಿದೆ. ಇದಕ್ಕೆ ಮತ್ತೊಂದು ಸಾಕ್ಷ್ಯವೇ ಪಹಲ್ಗಾಮ್ ದಾಳಿ. ಈ ದಾಳಿಗೆ ಪ್ರತೀಕಾರ ಹೇಗೆ, ಯಾವಾಗ ಅನ್ನೋದು ಸದ್ಯದ ಪ್ರತಿ ಭಾರತೀಯನ ಪ್ರಶ್ನೆ.
ಉಗ್ರರಿಗೆ ಹಾಲೆರೆದು ಕಂಟಕ ಮೇಲೆಳೆದುಕೊಳ್ತಾ ಪಾಕ್
ಪಹಲ್ಗಾಮ್ ಹತ್ಯಾಕಾಂಡಕ್ಕೆ ಪಾಪಿ ಪಾಕಿಗಳ ಕುಮ್ಮಕ್ಕಿದ್ದೇ ಇದೆ ಅನ್ನುವುದೀಗ ಬಹಿರಂಗ ಸತ್ಯ. ಶಸ್ತ್ರಾಸ್ತ್ರಗಳಿಂದ ಹಿಡಿದು ಆರ್ಥಿಕವಾಗಿ ಮತ್ತು ಭಾರತದೊಳಗೆ ನುಸುಳಲು ಅನುವಾಗುವ ಎಲ್ಲ ಕುತಂತ್ರಗಳನ್ನು ಮಾಡಿದ್ದೇ ಪಾಕ್. ದಾಳಿಯ ಮಾಸ್ಟರ್ ಮೈಂಡ್ ಖಾಲಿದ್ ಪಾಲಿಗೆ ಇದೇ ಐಎಸ್ ಐ ಗಾಡ್ ಫಾದರ್ ಅನ್ನೋದು ಸುಳ್ಳಲ್ಲ. ಇಂತಹ ಪಾಕ್ ಗೆ ಈಗ ನಿಂತಲ್ಲೇ ನೆಲ ನಡುಗುವಂಥಾ ಸ್ಥಿತಿ ಬಂದಿದೆ. ಪಹಲ್ಗಾಮ್ ದಾಳಿ ಬೆನ್ನಲ್ಲೇ ಪ್ರತೀಕಾರ ಪಕ್ಕಾ ಅಂತಾ ಪ್ರಧಾನಿ ಮೋದಿ ಫರ್ಮಾನು ಹೊರಡಿಸಿ ಆಗಿದೆ. ಹಾಗಾಗಿ ಭಾರತೀಯರ ಪ್ರತ್ಯುತ್ತರ ಹೇಗಿರಲಿದೆ ಅನ್ನೋ ಆತಂಕದಲ್ಲಿರೋ ಪಾಕ್ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರು ಎನ್ನುವಂತೆ ಆಡುತ್ತಿದೆ. ತರಾತುರಿಯಲ್ಲೇ ತನ್ನ ಸೇನಾ ಯುದ್ಧ ವಿಮಾನಗಳನ್ನು ಸರ್ವ ಸನ್ನದ್ಧ ಮಾಡುತ್ತಿದೆ.
ಕರಾಚಿಯಿಂದ ಲಾಹೋರ್ ಗೆ ಯುದ್ಧ ವಿಮಾನ
ಇದು ಬದಲಾದ ಭಾರತ. ಹೌದು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲಗಳನ್ನು ಪುಲ್ವಾಮಾ ದಾಳಿ ಬೆನ್ನಲ್ಲೇ ಭಾರತ ಸರ್ವನಾಶಗೊಳಿಸಿತ್ತು. ಈ ಕರಾಳ ನೆನಪಿನಿಂದಲೇ ಹೊರಬಾರದ ಪಾಕ್ ಈಗ ಮತ್ತಂಥದ್ದೇ ದುಸ್ಸಾಹಸಕ್ಕೆ ಕೈ ಹಾಕಿದೆ. ಹೀಗಾಗಿಯೇ ಆತುರಾತುರದಲ್ಲೇ ಕರಾಚಿಯಿಂದ ಯುದ್ಧ ವಿಮಾನಗಳನ್ನ ಲಾಹೋರ್ ಹಾಗೂ ರಾವಲ್ಪಿಂಡಿಗಳಿಗೆ ಸ್ಥಳಾಂತರಿಸ್ತಿದೆ. ಹಾಗೆ ನೋಡಿದ್ರೆ, ಲಾಹೋರ್, ರಾವಲ್ಪಿಂಡಿಗೆ ಭಾರತದ ಗಡಿ ಸಮೀಪದಲ್ಲಿದೆ. ಹೀಗಾಗಿ ಒಂದೊಮ್ಮೆ ಭಾರತ ಸಮರ ಸಾರಿದ್ರೆ ಎದುರಿಸುವ ಉದ್ದೇಶದಿಂದಲೇ ಪಾಕ್ ಇಂಥದ್ದೊಂದು ದುಸ್ಸಾಹಸಕ್ಕೆ ಕೈಹಾಕಿದೆ ಅನ್ನೋದು ಚರ್ಚೆಯಾಗ್ತಿದೆ. ಈಗಾಗಲೇ ಪಾಕ್ ವಾಯು ಮಾರ್ಗದಲ್ಲಿ ಯುದ್ಧ ವಿಮಾನಗಳ ಸಂಚಾರ ದಾಖಲಾಗಿದೆ. ಹೀಗಾಗಿ ಪಾಕ್ ಈಗ ಭಯದಲ್ಲೇ ಸಮಯ ದೂಡುತ್ತಿರೋದು ನಿಸ್ಸಂಶಯ.


















