ವಿಜಯನಗರ: ಜಿಲ್ಲೆಯ ಕೂಡ್ಲಿಗಿಯಲ್ಲಿ ಹುಣಸೆ ಉತ್ಸವ 2026ಕ್ಕೆ ಚಾಲನೆ ನೀಡಲಾಗಿದ್ದು, ಗುಡೇಕೋಟೆ ರಸ್ತೆಯಲ್ಲಿರುವ ಮೈದಾನದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ.
ನರಸಿಂಹಗಿರಿಯ ದೊಡ್ಮನೆ ಕುಟುಂಬದ ಎನ್. ಟಿ. ಬೊಮ್ಮಣ್ಣ ಅವರ ಸ್ಮರಣಾರ್ಥ ಈ ಹುಣಸೆ ಉತ್ಸವ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಹಾಗೂ ಆಳ್ವಾಸ್ ಸಾಂಸ್ಕೃತಿಕ ಕಲಾ ತಂಡಗಳ ವೈಭವಕ್ಕೆ ಚಾಲನೆ ನೀಡಲಾಗಿದೆ.
ಈ ಉತ್ಸವದಲ್ಲಿ ಆಳ್ವಾಸ್‌ನ ಡಾ. ಮೋಹನ್ ಆಳ್ವಾ, ಪ್ರಶಾಂತವೀರ ಸಾಗರ ಸ್ವಾಮೀಜಿ, ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಮತ್ತು ಎನ್. ಟಿ. ತಮ್ಮಣ್ಣ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


















