ಹಾರ್ಮುಜ್ ಜಲಸಂಧಿ ಬಳಿ 24 ಭಾರತೀಯರಿದ್ದ ಎಂಟಿ ತಾರಾ ಗ್ಯಾಸ್ ಎಲ್ಪಿಜಿ ಟ್ಯಾಂಕರ್ ಮೇಲೆ ದಾಳಿ ನಡೆದಿದೆ. ದಾಳಿಯಿಂದ ಟ್ಯಾಂಕರ್ ಹೊತ್ತಿ ಉರಿದಿದ್ದು, ದಾಳಿ ನಡೆಸಿದವರು ಯಾರೆಂಬುದು ನಿಗೂಢವಾಗಿದೆ. ಘಟನೆಯಲ್ಲಿ 21 ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ಓಮನ್ನ ಖಸಾಬ್ಗೆ ರವಾನಿಸಲಾಗಿದೆ. ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದು, ಓರ್ವ ನಾಪತ್ತೆಯಾಗಿದ್ದಾರೆ.
ಭಾರತೀಯರಿದ್ದ ಹಡಗಿನ ಮೇಲಿನ ಈ ದಾಳಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಪಶ್ಚಿಮ ಏಷ್ಯಾದಲ್ಲಿ ನೌಕಾ ಸಿಬ್ಬಂದಿ ಮೇಲೆ ಆಗಾಗ ನಡೆಯುತ್ತಿರುವ ಇಂತಹ ದಾಳಿಗಳು ಅತ್ಯಂತ ಕಳವಳಕಾರಿ ಎಂದು ಭಾರತ ಹೇಳಿದೆ.


















