ಬೆಂಗಳೂರು: ನಟ ಯುವರಾಜ್ ಕುಮಾರ್ ಅವರು 2 ಕೋಟಿ ರೂಪಾಯಿ ಮೌಲ್ಯದ ಹೊಸ ಆಡಿ-ಕ್ಯೂ8 ಕಾರನ್ನು ಖರೀದಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಸ್ಟಾರ್ಗಳ ಬಳಿಯಿರುವ ಈ ಮಾಡೆಲ್ ಕಾರು ಈಗ ದೊಡ್ಮನೆಗೆ ಬಂದಿದೆ. ರಾಘವೇಂದ್ರ ರಾಜ್ಕುಮಾರ್ ಅವರ ಸದಾಶಿವನಗರದ ಮನೆಗೆ ಈ ಹೊಸ ಕಾರು ಡೆಲಿವರಿಯಾಗಿದೆ. ಮನೆಯಲ್ಲೇ ಕಾರಿನ ರಿಜಿಸ್ಟ್ರೇಷನ್ ಪ್ರಕ್ರಿಯೆ ಕೂಡ ನಡೆದಿದೆ.
360 ಡಿಗ್ರಿ ಕ್ಯಾಮೆರಾ ಸೆಟಪ್ ಹೊಂದಿರುವ ಈ ಕಾರಿನಲ್ಲಿ ಯುವರಾಜ್ ಕುಮಾರ್ ಅವರು ಅಪ್ಪ, ಅಮ್ಮ ಮತ್ತು ಅಣ್ಣನ ಜೊತೆಗೆ ಫಸ್ಟ್ ರೈಡ್ ಹೋಗಿದ್ದಾರೆ. ಸದ್ಯ ಯುವರಾಜ್ ಕುಮಾರ್ ಅವರ ಹೊಸ ಕಾರಿನ ವಿಡಿಯೋ ವೈರಲ್ ಆಗಿದೆ. ಇನ್ನು ಎರಡು ವರ್ಷಗಳ ಹಿಂದೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಡಿ-ಕ್ಯೂ7 ಕಾರು ಖರೀದಿಸಿದ್ದರು.



















