ನವೆಂಬರ್ 16 ಮತ್ತು 17ರಂದು ಪ್ರಧಾನಿ ನರೇಂದ್ರ ಮೋದಿ ಫಿಲಿಪೈನ್ಸ್ ದೇಶಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಆಹ್ವಾನದ ಮೇರೆಗೆ ಈ ಭೇಟಿ ನಡೆಯಲಿದೆ.
ನವೆಂಬರ್ 17ರಂದು ನಡೆಯಲಿರುವ 23ನೇ ಏಷಿಯನ್ -ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. 2026ನೇ ವರ್ಷವನ್ನು ‘ಏಷಿಯನ್ -ಭಾರತ ಕಡಲ ಸಹಕಾರ ವರ್ಷ’ ಎಂದು ಆಚರಿಸಲಾಗುತ್ತಿರುವುದರಿಂದ ಈ ಭೇಟಿಗೆ ವಿಶೇಷ ಮಹತ್ವವಿದೆ.
ಈ ಭೇಟಿಯ ವೇಳೆ ಕಡಲ ಸಹಕಾರ ಬಲಪಡಿಸುವುದು, ವ್ಯಾಪಾರ ಮತ್ತು ಹೂಡಿಕೆ ಸಂಬಂಧ ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಸಹಭಾಗಿತ್ವ ಹೆಚ್ಚಿಸುವ ಕುರಿತು ಪ್ರಮುಖ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.


















