ಪೆಟ್ರೋಲ್ನಲ್ಲಿ ಎಥೆನಾಲ್ ಮಿಕ್ಸ್ ಮಾಡಲಾಗುತ್ತಿದೆ ಎಂಬ ಆರೋಪದ ಕಿಡಿ ಜೋರಾಗಿದೆ. ಈ ಎಥೆನಾಲ್ ಆರೋಪ ದೇಶಾದ್ಯಂತ ದೊಡ್ಡ ಕಿಚ್ಚು ಹಚ್ಚಿದೆ. ಈ ವಿಚಾರವಾಗಿ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಯುದ್ಧ ಶುರುವಾಗಿದೆ. ಪೆಟ್ರೋಲ್ಗೆ ಶೇಕಡಾ 30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ಎಥೆನಾಲ್ ಮಿಶ್ರಣದ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ನೇರ ಉತ್ತರ ನೀಡಿಲ್ಲ.
ಇತ್ತ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಈ ಕುರಿತು ವರದಿಯೊಂದನ್ನು ರವಾನಿಸಿದೆ. ಈ ಇಡೀ ವಿವಾದದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವಿಟ್ನಲ್ಲಿ ಕಿಡಿಕಾರಿದ್ದಾರೆ. ಮತ್ತೊಂದೆಡೆ ಕೇರಳದಲ್ಲೂ ಎಥೆನಾಲ್ ಪರೀಕ್ಷೆ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದೆ.

















