ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಬರಗಾಲದ ನಡುವೆಯೂ ತುಂಗಭದ್ರೆ ಹರಿದು ಬಂದು ಇತಿಹಾಸ ಸೃಷ್ಟಿಸಿದೆ. ಜಗಳೂರು ತಾಲೂಕಿನ 57 ಕೆರೆಗಳಿಗೆ ತುಂಗಭದ್ರಾ ನದಿಯ ನೀರು ತುಂಬುತ್ತಿದ್ದು, ಮಡ್ರಳ್ಳಿ ಕೆರೆಯಲ್ಲಿ ನೀರು ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ. ಈ ಹಿನ್ನೆಲೆಯಲ್ಲಿ ನೂರಾರು ರೈತರು ಮತ್ತು ಮಹಿಳೆಯರು ಕೆರೆಗಳಿಗೆ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಭಗೀರಥೋತ್ಸವ ಆಚರಿಸಿದ್ದಾರೆ.
ಈ ಸಂಭ್ರಮದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಹಾಗೂ ಸಿರಿಗೆರೆ ತರಳುಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿ ನೀರು ತುಂಬಿದ ಕೆರೆಗಳನ್ನು ವೀಕ್ಷಿಸಿದ್ದಾರೆ. ಕೆರೆಗಳಿಗೆ ಬಂದ ನೀರು ಕಂಡು ಜಗಳೂರು ತಾಲೂಕಿನ ಜನರಲ್ಲಿ ಭಾರಿ ಹರ್ಷ ವ್ಯಕ್ತವಾಗಿದೆ.


















