ದಾವಣಗೆರೆ:ವಿಜಯೇಂದ್ರ ಹಾಗೂ ಯತ್ನಾಳ್ ಭೇಟಿ ಆಕಸ್ಮಿಕ. ಯತ್ನಾಳ್ ಮತ್ತು ಈಶ್ವರಪ್ಪ ಸೇರ್ಪಡೆಗೆ ವಿರೋಧವಿಲ್ಲ. ಆದರೆ ಅವರ ಹೇಳಿಕೆಗಳು ಮರುಕಳಿಸಬಾರದು. ಬಿಜೆಪಿಗೆ ಯಾರೂ ಅನಿವಾರ್ಯವಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯವೇ ಇಲ್ಲ. ಮೋದಿ, ನಡ್ಡಾ, ಅಮಿತ್ ಶಾ ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿಸಿದ್ದಾರೆ. ಅವರೇ ಮುಂದುವರಿಯುತ್ತಾರೆ. ವಿಜಯೇಂದ್ರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ. ನೂರಕ್ಕೆ ನೂರು ಬಿಜೆಪಿ ಸರ್ಕಾರ ರಚನೆಯಾಗುತ್ತದೆ. ಆರ್.ಅಶೋಕ್ ದೆಹಲಿ ಭೇಟಿ ಕಾರಣ ಗೊತ್ತಿಲ್ಲ ಎಂದಿದ್ದಾರೆ.

















