ಕೋಣನಕುಂಟೆ ಕ್ರಾಸ್ನ ಫೋರಂ ಮಾಲ್ನಲ್ಲಿರುವ ಪಿವಿಆರ್ ಹಾಗೂ ಐನಾಕ್ಸ್ ಚಿತ್ರಮಂದಿರಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಭಾರಿ ರೇಡ್ ನಡೆಸಿದ್ದಾರೆ. ಮಾಲ್ನಲ್ಲಿ ಯಾರೋ ಕುಡಿದು ಬಿಸಾಡಿದ ಹಳೆ ಕಪ್ಗಳಲ್ಲೇ ಗ್ರಾಹಕರಿಗೆ ಮತ್ತೆ ಜ್ಯೂಸ್ ನೀಡಲಾಗುತ್ತಿದೆ ಎಂಬ ಗಂಭೀರ ದೂರು ಅಧಿಕಾರಿಗಳಿಗೆ ಸಾರ್ವಜನಿಕರಿಂದ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಮಾಲ್ ಹಾಗೂ ಥಿಯೇಟರ್ಗಳಲ್ಲಿ ಜ್ಯೂಸ್ ಕುಡಿಯುವ ಮುನ್ನ ಸಾರ್ವಜನಿಕರು ಹುಷಾರಾಗಿರಬೇಕಾಗಿದ್ದು, ಸದ್ಯ ಅಧಿಕಾರಿಗಳು ಕಪ್ಗಳ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

















